ಮುಳ್ಳಯ್ಯನಗಿರಿ ಪರ್ವತದಲ್ಲಿ ಘಟಿಸಿದ ಅಪರೂಪದ ಪ್ರಕೃತಿ ಸೌಂದರ್ಯ…

ಕರ್ನಾಟಕದಲ್ಲಿ ಕಂಡುಬರುವ ಅತಿ ಸುಮಧುರ ಪ್ರೇಕ್ಷಣೀಯ ಸ್ಥಳಗಳನ್ನು ಹೆಸರಿಸುವುದಾದರೆ ಅವುಗಳಲ್ಲಿ ಚಿಕ್ಕಮಗಳೂರು ಒಂದು. ಚಿಕ್ಕಮಗಳೂರು  ಪ್ರಕೃತಿ ಸೌಂದರ್ಯಕ್ಕೆ ಬೆರಗಾಗದವರಿಲ್ಲ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಪರ್ವತದಲ್ಲಿ ಘಟಿಸಿದ ಅಪರೂಪದ ಪ್ರಕೃತಿ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಹೌದು… ಅಧಿಕ ಮಳೆಯಿಂದಾಗಿ  ಮುಳ್ಳಯ್ಯನಗಿರಿ ಸೌಂದರ್ಯಕ್ಕೆ ಪ್ರವಾಸಿಗರು ಬೆರಗಾಗಿದ್ದಾರೆ.ಪರ್ವತದ ಸುತ್ತಲೂ ಚಾಚಿದ ಮೋಡದಂತಹ ಮಂಜನ್ನು ಕಣ್ತುಂಬಿಕೊಂಡ ನೂರಾರು ಪ್ರವಾಸಿಗರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ್ರು.

ಚದುರಿದ ಮಂಜುಮುಸುಕಿದ ಮೋಡದಂತಹ ದೃಶ್ಯ ಕಂಡು ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಪರೂಪದ ದೃಶ್ಯದ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳ್ಳಯ್ಯನಗಿರಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರಿಂದ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

Leave a Reply

Your email address will not be published.