ಮೆಟ್ರೋ ಹಳಿಗೆ ಹಾರಿ 25 ವರ್ಷದ ಯುವಕನಿಂದ ಆತ್ಮಹತ್ಯೆ

ದೆಹಲಿಯ ಬ್ಲೂ‌ಲೇನ್‌ ನ ಮೆಟ್ರೋ ಹಳಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ‌ ಘಟನೆ ನಡೆದಿದೆ.

ಶುಕ್ರವಾರ ಈ ಘಟನೆ ನಡೆದಿದ್ದು, ಮೆಟ್ರೋ ರೈಲು ಹಳಿಗೆ ಹಾರಿರುವ ಆತ, ರೈಲು ಹಾಗೂ ಫ್ಲಾಟ್‌ಫಾರ್ಮ್ ನಡುವೆ ಸಿಕ್ಕಿಹಾಕಿಕೊಂಡಿದ್ದಾನೆ.

ದೆಹಲಿಯ ದ್ವಾರಕದಿಂದ ನೋಯ್ಡವನ್ನು ಸಂಪರ್ಕಿಸುವ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆಗೆ ಸುಮಾರಿಗೆ 25 ವರ್ಷದ ರಾಹುಲ್, ಟ್ಯಾಗೂರ್ ಗಾರ್ಡನ್ ಮೆಟ್ರೋ ಸ್ಟೇಷನ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾ‌ನೆ.

ಈ ಘಟನೆಯಿಂದ ಕೆಲ ಕಾಲ ಮೆಟ್ರೋ ರೈಲು ಸ್ಥಗಿತಗೊಂಡಿದ್ದವು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಪೊಲೀಸರು ಮಾತನಾಡಿದ್ದು, ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಆತನ ಬಳಿ‌ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

Leave a Reply