ಮೈಸೂರು ದಸರಾ : ವರುಣದಲ್ಲಿ ಗ್ರಾಮೀಣ ಮತ್ತು ರೈತ ದಸರಾ ಕ್ರೀಡಾಕೂಟಕ್ಕೆ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಇಂದು ವರುಣದಲ್ಲಿ ಗ್ರಾಮೀಣ ಮತ್ತು ರೈತ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯ್ತು.

ಮೈಸೂರು ತಾ. ವರುಣ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದೆ. ಕ್ರೀಡಾಕೂಟದಲ್ಲಿ ಭಾಗಿಯಾದ ಮಹಿಳೆಯರು, ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ದೆಯಲ್ಲಿ ಸ್ಪರ್ಧಿಸಿದರು.

ಪುರುಷರಿಗೆ ಮತ್ತು ಮಹಿಳೆಯರಿಗೆ ಐದು ತರಹದ ಆಟಗಳು ಆಯೋಜನೆ ಮಾಡಲಾಗಿದ್ದು, ಪುರುಷರಿಗೆ ಕೇಸರು ಗದ್ದೆ ಓಟ, ಗೋಣಿಚೀಲದ ಒಳಗೆ ಕಾಲಿಟ್ಟು ಓಡುವುದು, ಗೊಬ್ಬರ ಮೊಟೆ ಹೊತ್ತು ಓಡುವ ಸ್ಪರ್ದೆ, ಗುಂಡು ಎತ್ತುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಹಿಳೆಯರಿಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ದೆ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ದೆ. ಗೋಣಿಚೀಲದ ಒಳಗೆ ಕಾಲಿಟ್ಟು ಓಡುವುದು. ನೀರು ತುಂಬಿದ 3 ಮಡಿಕೆ ಹೊತ್ತು ನಡೆಯುವ ಸ್ಪರ್ದೆ, ಒಂಟಿಕಾಲಿನ ಓಟ ಹೀಗೆ 25 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ಆಯೋಜಿಸಿರುವ ರೈತ ದಸರಾ ಮತ್ತು ಗ್ರಾಮೀಣ ದಸರಾದ ಆಟದಲ್ಲಿ ಸ್ಪರ್ಧಿಸಿದ್ದಾರೆ.

Leave a Reply

Your email address will not be published.