‘ಮೋದಿ, ಅಮಿತ್ ಶಾರಿಂದ ಭ್ರಷ್ಟಾಚಾರ ಮಾಡಲು ಸಿಎಂಗೆ ವಿನಾಯಿತಿ’ ರೇವಣ್ಣ ಗಂಭೀರ ಆರೋಪ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರವರು ಭ್ರಷ್ಟಾಚಾರ ಮಾಡಿ ಎಂದು ಸಿಎಂ ಗೆ ವಿನಾಯಿತಿ ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್,ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವ್ರು ಇಂಜಿನಿಯರ್ ಗಳಿಗೆ ಮುಂಬಡ್ತಿ ನೀಡುವಲ್ಲಿ ಸಿಎಂ ಯಡಿಯೂರಪ್ಪ ಕಲೆಕ್ಷನ್ ಮಾಡುವ ಮೂಲಕ ಬಾರೀ ಅವ್ಯವಹಾರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 25 ಇಂಜಿನಿಯರ್ ಗಳಿಗೆ ಕಳೆದ ಎರಡು ತಿಂಗಳಿನಿಂದ ತಡೆ ಹಿಡಿದು ಈಗ 7 ಮಂದಿಗೆ ಮಾತ್ರ ಮುಂಬಡ್ತಿ ನೀಡಿದ್ದು, ಒಂದು ಸಮಾಜವನ್ನ ಗುರಿಯಾಗಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ರು.

ಬಿಜೆಪಿಯಲ್ಲಿ ಉತ್ತರಾಧಿಕಾರಿ ಸಂಸ್ಕೃತಿ ಇದೆ ಆದ್ರೆ ದೇವೇಗೌಡರ ಕುಟುಂಬದಲ್ಲಿ ಯಾವುದೇ ಉತ್ತರಾಧಿಕಾರಿ ಸಂಸ್ಕೃತಿ ಇಲ್ಲಾ ಜನಗಳೇ ನಮ್ಮ ಉತ್ತರಾಧಿಕಾರಿ ಎಂದರು. ನೆರೆ ಸಂತ್ರಸ್ತರು ಕಲೆಕ್ಷನ್ ಕೊಡೊಲ್ಲಾ ಅದಕ್ಕೆ ಅವರಿಗೆ ಪರಿಹಾರ ನೀಡುತ್ತಿಲ್ಲಾ, ಇಂಜಿನಿಯರ್ ಗಳು ಕಲೆಕ್ಷನ್ ಕೊಡ್ತಾರೆ ಅಂತಾ ಮುಂಬಡ್ತಿ ನೀಡಿದ್ದಾರೆ ಎಂದು ಆರೋಪಿಸಿದ್ರು.

Leave a Reply