ಯಗಚಿ ನದಿ ನೀರುಪಾಲಾದ ಮೂವರಲ್ಲಿ ಇಬ್ಬರು ಯುವಕರ ಮೃತದೇಹಗಳು ಪತ್ತೆ

ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸೇನಹಳ್ಳಿ ಯಗಚಿ ನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ ಮೂವರು ಯುವಕರ ಪೈಕಿ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ.

ರತನ್ ಮತ್ತು ಭೀಮರಾಜ್ ಮೃತದೇಹಗಳು ಪತ್ತೆಯಾಗಿದ್ದು, ಮನು ಮೃತದೇಹಕ್ಕಾಗಿ ಮುಂದುವರೆದ ಶೋಧ ಕಾರ್ಯ ನಡೆದಿದೆ. ಎರಡು ದಿನಗಳ ಹಿಂದೆ ನದಿಯಲ್ಲಿ ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸೇನಹಳ್ಳಿ ಯಗಚಿ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಕಾಣೆಯಾಗಿದ್ದರು. ಯುವಕರ ಪತ್ತೆ ಕಾರ್ಯಕ್ಕೆ ಗ್ರಾಮಸ್ತರು ಹಾಗೂ ಕುಟುಂಬಸ್ಥರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಎರಡು ದಿನಗಳ ಬಳಿಕೆ ಅಂದರೆ ಇಂದು ಶೋಧ ಕಾರ್ಯ ನಡೆದಿ ಮೃತ ದೇಹಗಳನ್ನು ಪತ್ತೆ ಹಚ್ಚಲಾಗಿದೆ.

ಮಂಗಳೂರಿನಿಂದ ಆಗಮಿಸಿರುವ ಎನ್ ಡಿ ಆರ್ ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದ್ದು,  ಮನು ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply