ಯಾರು ಏನೇ ಅಂದ್ರು ಬಿಎಸ್ವೈ ಅದೃಷ್ಟದ ಮುಖ್ಯಮಂತ್ರಿ – ವಿ. ಸೋಮಣ್ಣ

ಯಾರು ಏನೇ ಅಂದ್ರು ಬಿಎಸ್ವೈ ಅದೃಷ್ಟದ ಮುಖ್ಯಮಂತ್ರಿ ಎಂದು ಮಂಡ್ಯದ ಕೆ.ಆರ್.ಎಸ್. ನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಬಿಎಸ್ವೈ ಮುಖ್ಯಮಂತ್ರಿ ಆದ್ಮೇಲೆ ಹದಿನೈದೇ ದಿನಲ್ಲಿ ರಾಜ್ಯದಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಅದ್ರಲ್ಲಿ ಪ್ರಕೃತಿಯಿಂದ ಕೆಲವೊಂದು ಅನಾಹುತಗಳಾಯ್ತು, ಇದೇಲ್ಲಾ ನಡೀತವೇ. ಈಗ ಇದ್ಯಾವುದೋ ಜಾತಿ ಗಣತಿ ಯಂತೆ, ಈ ಜಾತಿ ಗಣತಿ ಪಾತಿ ಗಣತಿ ಎಲ್ಲ ಹೋಗಬೇಕ್ರೀ.

ಇದು ಹೋಗದೇ ಇಲ್ದೆ ಇದ್ರೆ ದೇಶ ಉದ್ದಾರ ಆಗುತ್ತಾ? ಇದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದ್ರು ಈಗ ನನ್ನ ತಲೆಯಲ್ಲಿ ಇರೋದು ಬರೀ ದಸರಾ ಮಾತ್ರ. ೧೯೨ ಕೋಟಿಯ ಜಾತಿ ಗಣತಿ‌ ಅಂತಾ ಮಾತ್ರ ಈ ಬಗ್ಗೆ ನನಗೆ ಜಾಸ್ತಿ ಗೊತ್ತಿದೆ. ನಾನು ರಾಜಕೀಯಕ್ಕೆ ಬಂದು ೪೨ ವರ್ಷ ಆಯ್ತು. ಈಗ ಅದರ ಬಗ್ಗೆ ಚರ್ಚೆ ಮಾಡೋದು ಬೇಡ.

ಸದ್ಯಕ್ಕೆ ಇದಲ್ಲಾ ಬೇಡ ಅ-೦೮ ರವರೆಗೂ ನಾವು‌ ದಸರಾ ಮಾಡೋಣ. ಮಂಡ್ಯ ಜಿಲ್ಲೆಯ ಕಬ್ಬು ಬೆಳೆದ ರೈತರ ಸಮಸ್ಯೆ ಬಗ್ಗೆ ಸಿ.ಎಂ. ಈಗಾಗಲೇ ಮಾತಾಡಿದ್ದಾರೆ ಎಂದು ಯಡಿಯೂರಪ್ಪನ ಪರ ಬ್ಯಾಂಟಿಂಗ್ ಮಾಡಿದರು.

Leave a Reply

Your email address will not be published.