“ಯಾವ ಕೆಲಸ ಬರುವುದಿಲ್ಲವೋ ಆ ದುಸ್ಸಾಹಸಕ್ಕೆ ಕೈ ಹಾಕಬಾರದು ಡಿಯರ್ ಎಂಡಿಯಾ “ ಪಾಕ್ ಪೊಗರು

ಬಾಹ್ಯಾಕಾಶ ರಂಗದಲ್ಲಿ ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಕಡಿತದಿಂದ ಅಲ್ಪ ಹಿನ್ನಡೆಯಾಗಿದ್ದು  ಈ ಬೆಳವಣಿಗೆಯನ್ನು ಕಂಡು ಪಾಕಿಸ್ತಾನ  ಲೇವಡಿ ಮಾಡಿದೆ.

“ಯಾವ ಕೆಲಸ ಬರುವುದಿಲ್ಲವೋ ಅದನ್ನು ಕೈಗೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು ಡಿಯರ್ ಎಂಡಿಯಾ “ ಎಂದು ಪಾಕಿಸ್ತಾನದ ವಿಜ್ಙಾನ ಮತ್ತು ತಂತ್ರಜ್ಙಾನ ಸಚಿವ ಫವಾದ್ ಹುಸೇನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಂದ್ರಯಾನ -2 ಹಿನ್ನಡೆ ಕುರಿತು ಲೇವಡಿ ಮಾಡಿದ್ದಾರೆ.

ಇಂಡಿಯಾ ಎನ್ನುವ ಬದಲು ಎಂಡಿಯಾ ಎಂದಿರುವ ಸಚಿವ, ಚಂದ್ರನಲ್ಲಿ ಇಳಿಯಬೇಕಿದ್ದ ಆಟಿಕೆ ಮುಂಬೈ ಮೇಲೆ ಬಿದ್ದಿದೆ, 900 ಕೋಟಿ ವ್ಯರ್ಥವಾಗಿ ಹೋಗಿದೆ, ಭಾರತದ ಪ್ರಧಾನಿ ರಾಜಕಾರಣಿಯಲ್ಲ, ಗಗನಯಾನಿ ಎಂದು  ಸರಣಿ ಟ್ವೀಟ್ ಗಳ ಮೂಲಕ ವ್ಯಂಗ್ಯವಾಡಿದ್ದಾರೆ .

ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ  ಸಚಿವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
https://twitter.com/fawadchaudhry

 

 

Ch Fawad Hussain

@fawadchaudhry

Awwwww….. Jo kaam ata nai panga nai leitay na….. Dear “Endia” https://twitter.com/cgbassa/status/1170070679250714624 

Cees Bassa@cgbassa
Replying to @cgbassa and 5 others

It looks like the @isro #Chandrayaan2 Vikram lander has crashed. After the rough braking phase the Doppler curve from @radiotelescoop shows some wiggles, and then, at 20:20:01UTC the signals disappeared…

14.3K people are talking about this

 

Leave a Reply

Your email address will not be published.