ಲೋಕಸಭಾ ಚುನಾವಣೆಗೆ ಬಿಜೆಪಿ 90,000 ಕೋಟಿ ವೆಚ್ಚ ಮಾಡಲಿದೆ: ಪ್ರಶಾಂತ್ ಭೂಷಣ್…

ಈ ಬಾರಿಯ ಲೋಕಸಭಾ ಚುನಾವಣೆಗೆ 1 ಲಕ್ಷ ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ಇದರಲ್ಲಿ ಶೇ.90ರಷ್ಟು ಭಾಗ ಬಿಜೆಪಿಯೇ ವೆಚ್ಚ ಮಾಡಲಿದೆ ಎಂದು ಪ್ರಸಿದ್ಧ ಸುಪ್ರೀಂ ಕೋರ್ಟ್ ವಕೀಲ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಸಾಮಾಜಿಕ ರಾಜಕೀಯ ಸಂಸ್ಥೆ ಸ್ವರಾಜ್ ಅಭಿಯಾನ್‌ನ ಪ್ರಣಾಳಿಕೆ ಬಿಡುಗಡೆಗೊಳಿಸಿದ ಅವರು ಬಳಿಕ ಸ್ವರಾಜ್ಯ ಮರುಗಳಿಕೆ ವಿಷಯದ ಕುರಿತು ಮಾತನಾಡಿದರು.
ಇಂದಿನ ದಿನಗಳಲ್ಲಿ ಚುನಾವಣೆಗಳಲ್ಲಿ ಹಣವೇ ಏಕೈಕ ಅಂಶವಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚುನಾವಣಾ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ಅಗತ್ಯವಾಗಿದೆ. ಚುನಾವಣಾ ನಿಧಿಯಲ್ಲಿ ಪಾರದರ್ಶಕತೆ ಬರಬೇಕಿದೆ. ಎಲೆಕ್ಟೋರಲ್ ಬಾಂಡ್ ಎಂಬ ಹೆಸರಿನ ಅಪಾರದರ್ಶಕ ವ್ಯವಸ್ಥೆ ಯಾವ ದೇಶದಲ್ಲೂ ಇಲ್ಲ. ಕಾರ್ಪೊರೇಟ್‌ಗಳು ಯಾವುದೇ ಪಕ್ಷಕ್ಕೆ ರಹಸ್ಯವಾಗಿ ಹಣ ವರ್ಗಾಯಿಸುವಂತಹ ಈ ವ್ಯವಸ್ಥೆ ಹೊಂದಿದ್ದೇವೆ ಎಂದು ಅವರು ಬೇಸರಿಸಿದರು.
ನಾವು ಉತ್ತಮ ಜನಪ್ರತಿನಿಧಿಗಳನ್ನು ಹೊಂದುತ್ತಿಲ್ಲ. ಅತ್ಯುತ್ತಮ ಅಭ್ಯರ್ಥಿಯ ಬದಲಾಗೆ ಗೆಲ್ಲುವ ಅಭ್ಯರ್ಥಿಗೆ ಮತ ಚಲಾಯಿಸುತ್ತಿದ್ದೇವೆ ಎಂದರು.

Leave a Reply