ವಿದ್ಯುತ್ ಕಾರು, ಬೈಕುಗಳು ಇನ್ನು ಅಗ್ಗ! : ಕನಿಷ್ಟ ಜಿಎಸ್ಟಿ ಪಟ್ಟಿಗೆ ವಿದ್ಯುತ್ ವಾಹನಗಳು

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಹಾದಿಯಲ್ಲಿ ಕೇಂದ್ರ ಸರಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇವುಗಳ ಬದಲಿಗೆ ವಿದ್ಯುತ್ ಚಾಲಿತ ವಾಹನಗಳ ಓಡಾಟ ಹೆಚ್ಚಳಕ್ಕೆ ಸರಕಾರ ಅನುವು ಮಾಡಿಕೊಟ್ಟಿದೆ.
ವಿಸ್ಯುತ್ ಚಾಲಿತ ವಾಹನಗಳ ಮೇಲಿನ ಜಿಎಸ್ಟಿಯನ್ನ ಕನಿಷ್ಟ ಮಟ್ಟಕ್ಕೆ (ಶೇ. 5) ಇಳಿಸಲಾಗಿದೆ. ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾಗಿ ಬೇಕಾದ ಚಾರ್ಜರುಗಳ ಮೇಲಿನ ತೆರಿಗೆಯನ್ನೂ ತೀಕ್ಷಣವಾಗಿ ಕಡಿತ ಮಾಡಲಾಗಿದೆ.

ಈ ದರ ಇಳಿಕೆಯು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು 36ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಿಎಸ್ಟಿ ಮಂಡಳಿಯ ಈ ನಿರ್ಧಾರದಿಂದಾಗಿ ವಿಸ್ಯುತ್ ಚಾಲಿತ ವಾಹನಗಳ ಬೆಲೆ ಗಣನೀಯವಾಗಿ ಕಡಿಮೆಯಾಗಲಿದ್ದು, ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ.

ಸ್ಥಳೀಯ ಪ್ರಾಧಿಕಾರಿಗಳು ವಿದ್ಯುತ್ ಚಾಲಿತ ಬಸ್‌ಗಳ ಬಾಡಿಗೆ ಪಡೆಯುವುದಕ್ಕೆ ಜಿಎಸ್‌ಟಿಯಿಂದ ವಿನಾಯತಿ ನೀಡುವುದಕ್ಕೂ ಕೌನ್ಸಿಲ್ ಅನುಮತಿ ನೀಡಿದೆ.

ಈಗಾಗಲೇ ಇಂಧನ ಆಧಾರಿತ ವಹನಗಳ ಉತ್ಪಾದನೆ ಕುಂಠಿತಗೊಂಡಿದ್ದು ಹಲವಾರು ವಾಹನ ತಯಾರಿಕಾ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ.

Leave a Reply