ವಿದ್ಯುತ್ ಶಾಟ್ ಸರ್ಕಿಟ್ ನಿಂದ ಯುವಕ ಸಾವು : ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ

ವಿದ್ಯುತ್ ಶಾಟ್ ಸರ್ಕಿಟ್ ನಿಂದ ಯುವಕ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕು ಹುಲಿಗಿ ಗ್ರಾಮದಲ್ಲಿ ನಡೆದಿದೆ.

ಮೊಹ್ಮದ್ ಅಲಿ ಮೃತ ಯುವಕ. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ವೈಯರ್ ತಗುಲಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದ್ದು, ಇದಕ್ಕೆ ಜೆಸ್ಕಾಂ ಸಿಬ್ಬಂದಿಯೇ ಕಾರಣ ಎನ್ನುತ್ತಿದ್ದಾರೆ ಗ್ರಾಮಸ್ಥರು. 215 ರೂಪಾಯಿ ವಿದ್ಯತ್ ಬಿಲ್ ಪಾವತಿಸಿಲ್ಲ ಅಂತಾ ಸಂಪರ್ಕ ಕಟ್ ಮಾಡಿದ ಜೆಸ್ಕಾಂ ಸಿಬ್ಬಂದಿ, ಬಿಲ್ ಪಾವತಿಸುತ್ತೇವೆ ಅಂತಾ ಗೋಗರೆದರೂ ಸಂಪರ್ಕ ಕಟ್ ಮಾಡಿದ್ದಾನೆ.

ಮೀಟರ್ ನಲ್ಲಿ ಕರೆಂಟ್ ಕಟ್ ಮಾಡಲಾಗಿದೆ. ಘಟನೆಯಿಂದ ಆಕ್ರೋಶಗೊಂಡಿರೋ ಮೃತರ ಕುಟುಂಬ ಮತ್ತು ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ.

Leave a Reply