ವೀಸಾ ಕೊಡ್ಸಿ ಪುಣ್ಯ ಕಟ್ಕೊಳ್ಳಿ : ವೀಸಾಗಾಗಿ ವಿದೇಶ ಸಚಿವರಿಗೆ ಮೊರೆಯಿಟ್ಟ ಸೈನಾ

ಭಾರತದ ಖ್ಯಾತ ಶಟ್ಲರ್‍ ಸೈನಾ ನೆಹ್ವಾಲ್ ವೀಸಾಗಾಗಿ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಪಂದ್ಯಾಟದಲ್ಲಿ ಭಾವಸಹಿಸಲು ಡೆನ್ಮಾರ್ಕಿಗೆ ತೆರಳಬೇಕಿದ್ದು ವೀಸಾಗಾಗಿ ಅವರು ವಿದೇಶಾಮಗ ಸಚಿವ ಜೈಶಂಕರ್ ಅವರಲ್ಲಿ ಮೊರೆ ಇಟ್ಟಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರವ ಸೈನಾ, ಮುಂದಿನ ವಾರ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆರಂಬವಾಗಲಿದೆ. ಅದಕ್ಕೆ ಮುನ್ನ ಅಲ್ಲಿಗೆ ತಲುಪಲು ವೀಸಾ ಕೊಡಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ನನಗೆ ಮತ್ತು ನನ್ನ ಟ್ರೇನರ್‌ಗೆ ವೀಸಾ ನೀಡಿಕೆ ಪ್ರಕ್ರಿಯೆ ಚುರುಕುಗೊಳಿಸಲು ನೆರವಾಗಿ ಎಂದು ವಿಶ್ವದ ಮಾಜಿ ನಂ. 1 ಹಾಗೂ ಹಾಲಿ ನ.8ನೇ ಆಟಗಾರ್ತಿ ಸೈನಾ ನೆಹ್ವಾಲ್ ವಿದೇಶಾಂಗ ಸಚಿವರನ್ನು ಕೇಳಿಕೊಂಡಿದ್ದಾರೆ. ಡೆನ್ಮಾರ್ಕ್‌ ಓಪನ್ ಪಂದ್ಯಾವಳಿ ಇದೇ 15ರಿಂದ ಒಡೆನ್ಸ್‌ನಲ್ಲಿ ಆರಂಭವಾಗಲಿದೆ.

ಕಳೆದ ಬಾರಿಯ ಡೆನ್ಮಾರ್ಕ್ ಓಪನ್‍ ಪಂದ್ಯವಾಳಿಯಲ್ಲಿ ಸೈನಾ ನೆಹ್ವಾಲ್ ರನ್ನರ್ ಅಪ್ ಆಗಿದ್ದರು. ಈ ಪಂದ್ಯಾವಳಿಯಲ್ಲಿ ಸೈನಾ ಹೊರತಾಗಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ಭಾರತದ ಅಗ್ರಮಾನ್ಯ ಶಟ್ಲರ್ ಪಿವಿ ಸಿಂಧು ಸಹ ಭಾಗವಹಿಸಲಿದ್ದಾರೆ.

Leave a Reply