ಶಾಲಾ ಬಸ್ – ಬೈಕ್‌ ನಡುವೆ ಡಿಕ್ಕಿ : ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆ

ಶಾಲಾ ಬಸ್ – ಬೈಕ್‌ ನಡುವೆ ಡಿಕ್ಕಿಯಾಗಿರುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿ ವೈರಲ್ ಆಗಿದೆ. ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಅಣಜೂರು ತಿರುವಿನಲ್ಲಿ ಈ ಘಟನೆ ನಡೆದಿದ್ದು,  ಬೈಕ್-ಶಾಲಾ ವಾಹನ ಡಿಕ್ಕಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯಾವುದೇ ಸೂಚನೆ ನೀಡದೇ ಬಸ್ಸನ್ನ ಬಲಕ್ಕೆ ತಿರುಗಿಸಿದ್ದೇ ತಡ ಎದುರಿಗೆ ವೇಗವಾಗಿ ಬಂದ ಬೈಕ್ ಸವಾರ ಬಸ್ ಗೆ ಗುದ್ದಿದ್ದಾನೆ. ಬಸ್ಸಿನ ಮುಂಭಾಗದಿಂದ ಬಂದ ಬೈಕ್‌ ಸವಾರ ಬೈಕನ್ನ ನಿಯಂತ್ರಿಸಲಾಗದೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು,  ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು , ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

Leave a Reply