ಸಚಿವರಿಂದ ನಾಡಹಬ್ಬ ದಸರೆಯ ಪೋಸ್ಟರ್ ಬಿಡುಗಡೆ…

ಸಚಿವ ಸೋಮಣ್ಣ ಹಾಗೂ ಶಾಸಕ ರಾಮದಾಸ್‌ ಮೈಸೂರಿನ ಜಲದರ್ಶಿನಿಯಲ್ಲಿ ನಾಡಹಬ್ಬ ದಸರೆಯ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಪೋಸ್ಟರ್ ರಿಲೀಸ್‌‌ನಲ್ಲಿ ಭಾಗಿಯಾದ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ , ಪೋಸ್ಟರ್ ಬಳಿಕ ದಸರಾ ವೆಬ್‌ಸೈಟ್‌ಗು ಚಾಲನೆ ನೀಡಿದರು.
ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್‌ರಿಂದಲೇ ವೆಬ್‌ಸೈಟ್‌ಗೆ ಚಾಲನೆ.

ಕಡೆಗು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ರಾಮದಾಸ್, ಮುನಿಸು ಮರೆತು ಪೋಸ್ಟರ್ ರಿಲೀಸ್‌ ಮಾಡಿದ್ದಾರೆ. ಸಚಿವ ವಿ.ಸೋಮಣ್ಣ ಪಕ್ಕದಲ್ಲಿ ಕುಳಿತು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು

ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜಮಾರ್ಗದಲ್ಲಿ ಗಜಪಡೆಗಳ ಪಾದಯಾತ್ರೆ ನಡೆಸಲಾಗುತ್ತಿದೆ. ಸೋಮಣ್ಣ ಅವರು ಬೆಳ್ಳಂಬೆಳಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪಾದಯಾತ್ರೆ ಮಾಡಿದರು. ಈ ವೇಳೆ ಜಂಬೂಸವಾರಿ ತೆರಳುವ ಮಾರ್ಗದಲ್ಲಿ ಕಾಮಗಾರಿ ಹಾಗೂ ಸ್ಥಳ ಪರಿಶೀಲನೆ ಮಾಡಿದರು.

ಅಲ್ಲದೆ ಜಂಬೂ ಸವಾರಿ ಮಾರ್ಗದ ಅಸುಪಾಸಿನಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಬನ್ನಿಮಂಟಪದವರೆಗೂ ಸೋಮಣ್ಣ ವಾಕಿಂಗ್ ಮಾಡಿದರು. ಈ ವೇಳೆ ವಿ. ಸೋಮಣ್ಣಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮೇಯರ್ ಜಗನ್ನಾಥ್ ಸಾಥ್ ನೀಡಿದರು.

ಸಮಸ್ಯೆಗಳ ಬಗ್ಗೆ ಗಮನಹರಿಸಿ ಸ್ಥಳದಲ್ಲೇ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಸರಾಗೆ ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

Leave a Reply