ಸಮ್ಮಿಶ್ರ ಸರ್ಕಾರದಲ್ಲಿ ಅನ್ಯಾಯ, ಬಿಜೆಪಿಯಲ್ಲಿ ನ್ಯಾಯ – ಈ ಬಾರಿ ತೀರ್ಪು ನಮ್ಮ ಕಡೆಗೆ : ಬಿ.ಸಿ ಪಾಟೀಲ್ ವಿಶ್ವಾಸ

ನಾಳೆ ಸುಪ್ರೀಂ‌ನಲ್ಲಿ ಅನರ್ಹ ಶಾಸಕರ ಕೇಸ್ ವಿಚಾರಕ್ಕೆ ಮೈಸೂರಿನಲ್ಲಿ ಮಾತನಾಡಿದ ಅನರ್ಹ ಶಾಸಕ ಬಿ.ಸಿ ಪಾಟೀಲ್ , ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡಿ ನಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮದು ಪಕ್ಷ ದ್ರೋಹದ ಪ್ರಶ್ನೆಯೇ ಇಲ್ಲ. ನಾವು ಒಂದು ಪಕ್ಷದಲ್ಲಿದ್ದು ಬೇರೆ ಪಕ್ಷದಕ್ಕೆ ಮತ ಹಾಕಿದ್ದರೆ ಅದು ಪಕ್ಷ ದ್ರೋಹ. ರಾಜೀನಾಮೆ ನೀಡುವುದು ಶಾಸಕರ ಮೂಲಭೂತ ಹಕ್ಕು. ಮತ ಹಾಕಿದ ಜನರ ಒಮ್ಮತದಿಂದ ರಾಜೀನಾಮೆ ನೀಡಿದ್ದೇವೆ. ಸಿದ್ದರಾಮಯ್ಯ ಅವರಿಗೆ ಮಾತ್ರ ಸಿಎಂ ಪಟ್ಟ ಕಾದು ಕುಳಿತಿಲ್ಲ. ನನಗೂ ಸಿಎಂ ಆಗಬೇಕು ಪ್ರಧಾನಿ ಆಗಬೇಕೆಂಬ ಆಸೆ ಇದೆ. ಪ್ರತಿಯೊಬ್ಬನಿಗೂ ಉನ್ನತ ಸ್ಥಾನಕ್ಕೆ ಹೋಗಬೇಕೆಂದು ಆಸೆ ಎಲ್ಲರೂ ಪಡುತ್ತಾರೆ.  ಆ ಆಸೆಗಳನ್ನ ಜನರು ತೀರಿಸಬೇಕು. ಜೆಡಿಎಸ್‌ ಪಕ್ಷಕ್ಕೆ ದೊಡ್ಡತನ ಇಲ್ಲ. ಸಂಕುಚಿತ ಭಾವನೆಯಿಂದ ಪಕ್ಷ ಸೀಮಿತವಾಗಿ ಚಿಕ್ಕದಾಗಿ ಉಳಿದಿದೆ. ಉಪ ಚುನಾವಣೆಯಲ್ಲಿ ನಾವೇ ಸ್ಪರ್ಧಿಸುತ್ತೇವೆ. ಅದನ್ನು ಎದುರಿಸಲು ಸಿದ್ದರಾಗಿದ್ದೇವೆ ಎಂದರು.

ನಮಗೆ ಸಮ್ಮಿಶ್ರ ಸರ್ಕಾರದಲ್ಲಿ ಅನ್ಯಾಯವಾಗಿತ್ತು. ಅದನ್ನು ಬಿಜೆಪಿ ಸರ್ಕಾರ ಸರಿ ಮಾಡಿದೆ. ಉಪ ಚುನಾವಣೆ ನಮಗೆ ಪ್ರತಿಷ್ಠೆ. ಅದನ್ನು ಗೆಲ್ಲುವುದು ನಮ್ಮ ಪ್ರತಿಷ್ಠೆ. ಸಿದ್ದರಾಮಯ್ಯ ಒಬ್ಬರೇ ಎಲ್ಲರನ್ನೂ ಸೋಲಿಸುತ್ತಾರೆ ಅನ್ನೋದು ಆಗಲ್ಲ. ನಾನೇ ಅಧಿಪತಿಯಾಗುತ್ತೇನೆ ಅಂದರೆ ಅದು ಸಾಧ್ಯವಿಲ್ಲ. ಆ ರೀತಿ ಇದ್ದರೆ ಜನ ಅವರನ್ನು ಚಾಮುಂಡೇಶ್ವರಿಯಲ್ಲಿ ಏಕೆ ಸೋಲಿಸಿದರು. 120 ಇದ್ದದ್ದು 80 ಸ್ಥಾನ‌ ಏಕೆ ಆಯಿತು. ಜನರು ಪ್ರಭುಗಳು ಸಿದ್ದರಾಮಯ್ಯ ಅವರ ತೀರ್ಪು ಮುಖ್ಯ ಅಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಕಾಲಿಡುವುದಿಲ್ಲ. ಆ ಪ್ರಶ್ನೆಯೇ ನನ್ನ ಮುಂದೆ ಇಲ್ಲ. ಸಿದ್ದರಾಮಯ್ಯ ಮೇಲೆ ವೈಯಕ್ತಿಕ ದ್ವೇಷ ಇಲ್ಲ. ಅವರ ಮೇಲೆ ನನಗೆ ಪ್ರೀತಿ ಇತ್ತು. ಕುಮಾರಸ್ವಾಮಿ ಅವರಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಅವರಿಗೆ ನಮ್ಮಂತವರ ಸಲಹೆಯ ಅವಶ್ಯಕತೆಯೇ ಇಲ್ಲ. ಅಮೆರಿಕಾ ಹೋಗುವ ಮುನ್ನ ಸಲಹೆ ನೀಡಿದ್ದೆ. ನೀವು ಬದಲಾಗಿದ್ದೀರಾ ಮೊದಲಿನಂತೆ ಆಗಿ ಎಂದು. ಅವರದು ಕುಟುಂಬ ರಾಜಕಾರಣ. ಸಂಕುಚಿತ ಭಾವನೆ ಅದಕ್ಕೆ ಈ ಪರಿಸ್ಥಿತಿ ಬಂತು. ನಾವು ಸೂಪರ್ ಸಿಎಂಗಳಲ್ಲ.
ಬಿಜೆಪಿ ಸರ್ಕಾರಕ್ಕೆ ನಮ್ಮ ಮೇಲೆ ಕೃತಜ್ಞತೆಯಿಂದ ಇದೆ. ನಮ್ಮಿಂದ ಸರ್ಕಾರ ಬಂತು ಅಂತಾ ಅಭಿಮಾನ ಇದೆ. ಈ ಕೃತಜ್ಞತೆ ಇದೇ ರೀತಿ ಇರುತ್ತದೆ ಅನ್ನೋ ಭಾವನೆ ಇದೆ. ರಾಜಕೀಯದಲ್ಲಿ ಸದಾ ಕಾಲೆಳೆಯುವ ಕೆಲಸ ಅಗುತ್ತದೆ. ಅದನ್ನು ಮೀರಿ ಬೆಳೆಯಬೇಕು. ವೈರಿಗಳನ್ನು ಎದುರಿಸಬಹುದು. ಹಿತಶತೃಗಳನ್ನು ಎದುರಿಸುವುದು ಕಷ್ಟ. ಅದನ್ನು ಮೀರಿ ಮೇಲೆ ಬಂದರೆ ಅವನೇ ನಾಯಕ ಎಂದರು

ಅನರ್ಹ ಶಾಸಕರೆಲ್ಲಾ ಒಗ್ಗಟ್ಟಾಗಿದ್ದೇವೆ. ಕೆಲವರಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಗೊಂದಲ ಸೃಷ್ಠಿಯಾಗಿದೆ.ಕಾಂಗ್ರೆಸ್ ಜೆಡಿಎಸ್‌ ನಿಂದ ಹಾಲಲ್ಲಿ ಉಪ್ಪು ಹಾಕುವ ಕೆಲಸ ನಡೆದಿದೆ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.