ಸಿಬ್ಬಂದಿಯಿಂದ ಕಿರುಕುಳ : ಆತ್ಮಹತ್ಯೆಗೆ ಯತ್ನಸಿದ ಮಹಿಳಾ ಕಾರ್ಮಿಕೆ – ಸ್ಥಳೀಯರಿಂದ ಪ್ರತಿಭಟನೆ

ಸಿಬ್ಬಂದಿಯ ಕಿರುಕುಳದಿಂದಾಗಿ ಮಹಿಳಾ ಕಾರ್ಮಿಕೆಯೊಬ್ಬಳು ಆತ್ಮಹತ್ಯೆಗೆ ಯತ್ನಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ರಾಚಮಾನಹಳ್ಳಿಯಲ್ಲಿ ನಡೆದಿದೆ.

ರಾಚಮಾನಹಳ್ಳಿ ವಾಸಿ ಉಷಾ(32) ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಕಾರ್ಮಿಕೆ. ಮಾಯಸಂದ್ರ ಸಮೀಪದ ಡಿಎಚ್ ಎಲ್ ಲೇವಿಸ್ ಕಂಪನಿ ಸಿಬ್ಬಂದಿ ವಿರುದ್ಧ ಕಿರುಕುಳ ಆರೋಪ ಮಾಡಲಾಗುತ್ತಿದೆ.

ಉಷಾ ಡೆತ್ ನೋಟ್ ನಲ್ಲಿ ಮಾಡಿದ ಆರೋಪ :-

ಕಳೆದ ಐದು ವರ್ಷಗಳಿಂದ ಡಿಎಚ್ ಎಲ್ ಲೇವಿಸ್ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದೆನೆ. ನಾವು ತುಂಬಾ ಬಡವರು, ಕೂಲಿ ಮಾಡದೇ ವಿಧಿಯಿಲ್ಲ. ಆದ್ರೆ ಇತ್ತೀಚೆಗೆ ರಮೇಶ್, ಗಾಂಧಿ, ಪುಷ್ಪಾ, ನಾಗರಾಜ್ ಮತ್ತು ಬಾಲರೆಡ್ಡಿ ಕೆಲಸ ಬಿಟ್ಟು ಹೋಗು ಎಂದು ಬೈತಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಿನ್ನೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಉಷಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಉಷಾ. ಇಂದು ಕಾರ್ಮಿಕರ ಮೇಲಿನ ಕಿರುಕುಳ ಖಂಡಿಸಿ ಸ್ಥಳೀಯರಿಂದ ಕಂಪನಿ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಮತ್ತು ನೊಂದ ಮಹಿಳೆಗೆ ಪರಿಹಾರ ಭರವಸೆ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈ ದಾಖಲಾಗಿದೆ.

Leave a Reply

Your email address will not be published.