ಸುಳ್ಳು ಸುದ್ದಿ ಹರಡುವುದು ಪಾಕಿಸ್ತಾನದ ರಕ್ತದಲ್ಲಿಯೇ ಇದೆ – ಭಾರತ ತಿರುಗೇಟು

ಹುಟ್ಟುತ್ತಾ ಸೋದರನಾಗಿದ್ದು ಬೇಳೆಯುತ್ತಾ ದಾಯಾದಿಯಾದ ನಮ್ಮ ನೆರೆಯ ರಾಷ್ಟ್ರ ಪಾಕಿಸ್ಥಾನ ಅದರ ಪಾಡಿಗೆ ಅದು ಇರದೆ ಸದಾ ಭಾರತದ ಆಂತರಿಕ ವಿಶವಾದ ಜಮ್ಮು-ಕಾಶ್ಮೀರ ವಿಚಾರದ ಬಗ್ಗೆ ಸುಳ್ಳು ಸುದ್ದಿ ಹರಡುವ ಪ್ರವೃತ್ತಿ ಪಾಕಿಸ್ತಾನದ ರಕ್ತದಲ್ಲಿಯೇ ಇದೆ ಮತ್ತು ಭಯೋತ್ಪಾದನೆ ಅದರ ಜೀವಾಳವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.

ಪಾಕಿಸ್ತಾನದ ವಿಲಕ್ಷಣ ನಡವಳಿಕೆಯಿಂದಾಗಿ ಆರ್ಥಿಕವಾಗಿ ದಿವಾಳಿಯಾಗಿರುವ ಅದರ ರಕ್ತದಲ್ಲಿ ಭಯೋತ್ಪಾದನೆಯ ಡಿಎನ್ಎ ಆಳವಾಗಿ ಬೇರೂರಿದ್ದು ತೀವ್ರಗಾಮಿ ಸಮಾಜವನ್ನು ಸೃಷ್ಟಿಸಿದೆ ಎಂದು ಪ್ಯಾರಿಸ್ ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಭಾರತ ನಿಯೋಗವನ್ನು ಪ್ರತಿನಿಧಿಸಿದ ಅನನ್ಯಾ ಅಗರ್ವಾಲ್ ಹೇಳಿದ್ದಾರೆ.ವಿಶ್ವಸಂಸ್ಥೆ ವೇದಿಕೆಯನ್ನು ಪಾಕಿಸ್ತಾನ, ಭಾರತದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಮತ್ತು ರಾಜಕೀಯ ಮಾಡುವುದಕ್ಕೆ ಬಳಸಿಕೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಭಯೋತ್ಪಾದನೆಯ ವಿಷಬೀಜ ಬಿತ್ತಿ ಅದು ಹೆಮ್ಮರವಾಗಿ ಬೆಳೆಯುವಂತೆ ಮಾಡುವುದರಲ್ಲಿ ಪಾಕಿಸ್ತಾನ ಮತ್ತಷ್ಟು ಸಕ್ರಿಯ ವಾಗಿದೆ ಎಂದು ಹೇಳಿದ್ದಾರೆ . ಪರಮಾಣು ಯುದ್ಧಕ್ಕೆ ವಿಶ್ವಸಂಸ್ಥೆಯನ್ನು ಘೋಷಣಾ ವೇದಿಕೆಯಾಗಿ ಬಳಸಿಕೊಂಡಿರುವ ಪಾಕಿಸ್ತಾನ ತನ್ನ ಕೀಳು ಮಟ್ಟದ ಬುದ್ದಿಯನ್ನು ಮತ್ತೆ ತೋರಿಸಿದೆ ಜಾಗತಿಕ ವಾಗಿ ಬೇರೊಂದು ದೇಶದ ಆಂತರಿಕ ಸಮಸ್ಯೆಯನ್ನು ಮಾತನಾಡಬಾರದೆಂಬ ಇಂಗಿತ ಜ್ಞಾನವು ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.

Leave a Reply