ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ : ಸೌರಭ್‌ ವರ್ಮಾ ಮತ್ತು ಪಿ.ವಿ ಸಿಂಧುಗೆ ಗೆಲುವು

ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಎರಡು ಅರ್ಹತಾ ನೇರ ಪಂದ್ಯಗಳಲ್ಲಿ, ಭಾರತದ ಬ್ಯಾಟ್ಮಿಂಟನ್‌ ಆಟಗಾರ ಸೌರಭ್‌ ವರ್ಮಾ ಮತ್ತು ಪಿ.ವಿ ಸಿಂಧು ಸುಲಭವಾಗಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹಾಂಕಾಂಗ್ ಓಪನ್‌ನಲ್ಲಿ 16ರ ಘಟ್ಟ ಪ್ರವೇಶಿಸಿದ್ದಾರೆ.

ಅಂತಿಮ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕಿತರಾದ ಸೌರಭ್ 21-15 21-19 ಸೆಟ್‌ಗಳಿಂದ ಥೈಲ್ಯಾಂಡ್‌ನ ತನೊಂಗ್‌ಸಾಕ್ ಸಾನ್ಸೊಂಬೂನ್‌ಸುಕ್ ಅವರನ್ನು ಸೋಲಿಸಿದರು.

ಹಾಗೆಯೇ ಪಿ.ವಿ ಸಿಂಧು 21-15, 21-16 ನೇರ ಸೆಟ್‌ಗಳಲ್ಲಿ 19ನೇ ಶ್ರೇಯಾಂಕದ ಕಿಮ್‌ ಗಾ ಯುನ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಇಂದು ನಡೆಯಲಿರುವ ಪುರುಷರ ಸಿಂಗಲ್ಸ್ ಮುಖ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಟಗಾರರಾದ ಕಿಡಂಬಿ ಶ್ರೀಕಾಂತ್, ಬಿ ಸಾಯಿ ಪ್ರಣೀತ್, ಸಮೀರ್ ವರ್ಮಾ, ಎಚ್.ಎಸ್.ಪ್ರಣಾಯ್ ಮತ್ತು ಪಾರುಪಲ್ಲಿ ಕಶ್ಯಪ್ ಕಣದಲ್ಲಿದ್ದಾರೆ.

ಸೌರಭ್ ಸಹೋದರ ಶ್ರೀಕಾಂತ್‌. ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೆಣಸಲಿದ್ದು, ಸಮೀರ್ ಅವರು ತೈಪೆಯ ತ್ಸು ವೀ ವಾನ್ಫ್ ವಿರುದ್ಧ ಸೆಣಸಲಿದ್ದಾರೆ. ಬಿ.ಸಾಯಿ ಪ್ರಣೀತ್, ಮೂರನೇ ಶ್ರೇಯಾಂಕಿತ ಚೀನಾದ ಶಿಯುಕಿ ವಿರುದ್ಧ ಆಡಲಿದ್ದಾರೆ. ಪ್ರಣಯ್ ಮತ್ತು ಕಶ್ಯಪ್ ಚೀನಾದ ಹುವಾಂಗ್ ಯು ಕ್ಸಿಯಾಂಗ್ ಮತ್ತು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಸಾತ್ವಿಕೈರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ವಿರುದ್ಧ ಸೆಣಸಲಿದೆ. ಪ್ರಣವ್ ಜೆರ್‍ರಿ ಚೋಪ್ರಾ ಮತ್ತು ಎನ್ ಸಿಕ್ಕಿ ರೆಡ್ಡಿ ಅವರ ಸಂಯೋಜನೆಯ ಥೈಲ್ಯಾಂಡ್‌ನ ನಿಪಿಟ್‌ಫಾನ್ ಫುವಾಂಗ್‌ಫುಪೆಟ್ ಮತ್ತು ಸಾವಿತ್ರಿ ಅಮಿತ್ರಪೈ ಮೂರನೇ ಶ್ರೇಯಾಂಕದ ಡೆಚಾಪೋಲ್ ಪುವಾರನುಕ್ರೊ ಮತ್ತು ಥೈಲ್ಯಾಂಡ್‌ನ ಸಪ್ಸಿರಿ ತೈರಟ್ಟಾನಾಚೈ ಅವರನ್ನು ಎದುರಿಸಲಿದ್ದಾರೆ.

ಇನ್ನು ಭಾರತದಿಂದ ಪ್ರಶಸ್ತಿ ಗೆಲ್ಲುವ ಸಂಭಾವ್ಯ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದ ಸೈನಾ ನೆಹ್ವಾಲ್ ಮತ್ತು ಮೊದಲನೇ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದ್ದಾರೆ.

Leave a Reply