ಹಿಂದಿ ಭಾಷೆ ಹೇರಿಕೆ ವಿಚಾರ-ಅಮಿತ್ ಶಾ ನಿಲುವಿಗೆ ಖಂಡನೆ….

ಹಿಂದಿ ಭಾಷೆ ಹೇರಿಕೆ ವಿಚಾರ-ಅಮಿತ್ ಶಾ ನಿಲುವಿಗೆ ಬಾಗಲಕೋಟೆಯ ಯಲ್ಲಟ್ಟಿಯಲ್ಲಿ ಖ್ಯಾತ ಸಾಹಿತಿ ಡಾ,. ಸಿದ್ದಲಿಂಗಯ್ಯ ಅವರಿಂದ ವಿರೋಧ ವ್ಯಕ್ತವಾಗಿದೆ.

ಅಮಿತ್ ಷಾ ಹಿಂದಿ ಹೇರಿಕೆ ಬಗ್ಗೆ ಮಾತನಾಡಿರೋದು ವಿಷಾದಕರ. ಹಿಂದಿ ಹೇರಿಕೆಯನ್ನು ದಕ್ಷಿಣ, ಈಶಾನ್ಯ ಭಾರತದ ರಾಜ್ಯಗಳು ಸಹಿಸೋದಿಲ್ಲ. ಒತ್ತಾಯಪೂರ್ವಕವಾಗಿ ಹೇರುವುದರಿಂದ ಹಿಂದಿ ಭಾಷೆಗೆ ಗೌರವ ಕಡಿಮೆಯಾಗುತ್ತೆ.. ಜನ್ರಿಗೆ ಒತ್ತಾಯ ಮಾಡಿದಂತಾಗುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡವೇ ನಮ್ಮ ವೃತ್ತಿ ಸಾಧನ. ಕನ್ನಡಕ್ಕೆ ಕೊಟ್ಟಿರೋ ಸ್ಥಾನವನ್ನು ಯಾವ ಭಾಷೆ ಆಕ್ರಮಿಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರು ಹೇಳಿರೋದು ಬಹಳ ದುಃಖದಾಯಕ ಸಂಗತಿ ಎಂದಿದ್ದಾರೆ.

ಮಾಧ್ಯಮಗಳ ಮೂಲಕ ಅಮಿತ್ ಷಾ ತಮ್ಮ ಹೇಳಿಕೆಯಲ್ಲಿ ತಿದ್ದುಪಡಿ ಮಾಡಿಕೊಂಡಂತೆ ಕಾಣುತ್ತಿದೆ. ಇದು ಸ್ವಾಗತಾರ್ಹ. ರಾಜ್ಯ ಸರ್ಕಾರ ತಾನೆ ಆಂಗ್ಲ ಮಾಧ್ಯಮ ಶಾಲೆ ತೆರೆದಿರೋದು ಸರಿಯಲ್ಲ. ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸ್ಬೇಕು.ಇಂಗ್ಲಿಷ್ ನ್ನೂ ಒಂದು ಭಾಷೆಯಾಗಿ ಸರ್ಕಾರ ನೆಟ್ಟಗೆ ಕಲಿಸ್ತಿಲ್ಲ‌. ಇಡೀ ಮಾಧ್ಯಮವನ್ನೇ ಇಂಗ್ಲಿಷ್ ನಲ್ಲಿ ಮಾಡಿರೋದು ಕನ್ನಡಕ್ಕೆ ಕುಠಾರಪ್ರಾಯ. ಸಿಎಂ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸರ್ಕಾರ ಪಬ್ಲಿಕ್ ಸ್ಕೂಲ್ ಆರಂಭಿಸಿದ ನಿರ್ಧಾರ ಹಿಂದೆ ತೆಗೆದುಕೊಳ್ಳಬೇಕು. ಶಾಲೆಯಲ್ಲಿ ಆಂಗ್ಲಭಾಷೆಯನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಮಾಡ್ಬೇಕು. ೧ರಿಂದ೭ ನೇ ತರಗತಿಯವ್ರಿಗೆ ಮಾಧ್ಯಮ ಮಾತೃಭಾಷೆಯಲ್ಲೇ ಇರಲಿ. ಈ ಬಗ್ಗೆ ಸಿಎಂ , ಶಿಕ್ಷಣ ಸಚಿವ್ರಿಗೆ ಮನವಿ ಮಾಡ್ತೇನೆ ಎಂದರು.

ಯಡಿಯೂರಪ್ಪ ಕನ್ನಡಾಭಿಮಾನಿಗಳು. ಕನ್ನಡಿಗರಿಗೆ ಮೆಚ್ಚಿಗೆಯಾಗುವ ನಿರ್ಧಾರ ಕೈಗೊಳ್ಳುವ ವಿಶ್ವಾಸ ನನಗಿದೆ ಎಂದರು. ಬ್ಯಾಂಕ್ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ನಡೆಸುವ ವಿಚಾರವಾಗಿ ಹಿಂದೆ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಯವ್ರಿಗೆ ಎರಡು ಬಾರಿ ಭೇಟಿಯಾಗಿದ್ವಿ. ಜೇಟ್ಲಿಯವರಿಗೆ ಒಂದು ಸ್ಪಷ್ಟತೆಯಿತ್ತು,ಅವರು ಒಪ್ಪಿಕೊಂಡಿದ್ರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆ ಖಂಡನೀಯ. ಈಗ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದ್ರೆ ಕಾರ್ಯರೂಪಕ್ಕೆ ಬರ್ತಿಲ್ಲ‌‌. ಗ್ರಾಮೀಣ ಬ್ಯಾಂಕ್ ನಲ್ಲಿ ಕನ್ನಡ ಪರೀಕ್ಷೆಗೆ ಸ್ಪಂದಿಸಿದ್ದಾರೆ. ಆದ್ರೆ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಮೌನವಹಿಸಿರೋದು ದುರದೃಷ್ಟಕರ. ಎಲ್ಲಾ ಬ್ಯಾಂಕ್ ಪರೀಕ್ಷೆಗಳು ಕನ್ನಡದಲ್ಲೇ ಆಗ್ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ.

ನೆರೆಗೆ ಕೇಂದ್ರ, ರಾಜ್ಯ ಸರ್ಕಾರ ಸ್ಪಂದಿಸದ ವಿಚಾರವಾಗಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಕೂಡಲೇ ನೆರೆಗೆ ಸ್ಪಂದಿಸ್ಬೇಕು. ಸಿಎಂ ಪ್ರತಿದಿನ ಪ್ರವಾಸ ಮಾಡ್ತಿದ್ದಾರೆ. ಸಿಎಂ ಅವರಿಗೆ ಒತ್ತಾಸೆಯಾಗುವಂತೆ ಕೇಳಿದ ಅನುದಾನ ಕೇಂದ್ರ ಬಿಡುಗಡೆ ಮಾಡ್ಬೇಕು ಎಂದು ಸಾಹಿತಿ ಡಾ ಸಿದ್ದಲಿಂಗಯ್ಯ ಮನವಿ ಮಾಡಿದ್ದಾರೆ.

Leave a Reply