ಹುಣಸೂರು ಉಪಚುನಾವಣೆ ಅಖಾಡಕ್ಕೆ ಇಳಿದ ಟಗರು : ಸಿದ್ದರಾಮಯ್ಯ ಭರ್ಜರಿ ಮತಭೇಟೆ

ಉಪ ಚುನಾವಣೆ ಅಖಾಡಕ್ಕೆ ಇಳಿದ ಟಗರು ಹುಣಸೂರಿನಲ್ಲಿ  ಭರ್ಜರಿ ಮತಭೇಟೆ ಶುರುಮಾಡಿದೆ.

ಹೌದು..  ಕಾಂಗ್ರೆಸ್ ಅಭ್ಯರ್ಥಿ, ಆಪ್ತ ಹೆಚ್.ಪಿ.ಮಂಜುನಾಥ್ ಪರ ಸಿದ್ದರಾಮಯ್ಯ ಅವರು ಮತಯಾಚನೆ ಆರಂಭಿಸಿದ್ದಾರೆ. ಇಂದು ಹುಣಸೂರಿನ ಹಲವು ಗ್ರಾಮದಲ್ಲಿ ಮತಯಾಚನೆ ಮಾಡಲಿರುವ ಸಿದ್ದರಾಮಯ್ಯ ಮತಯಾಚನೆಗು ಮುನ್ನ‌ ಹುಣಸೂರಿ‌ನ ಮದುವೆ ಮನೆಗೆ ತೆರಳಿ ವಧು-ವರರಿಗೆ ಶುಭಾಶಯ ಕೊರಿದ್ದಾರೆ. ಟಗರು ಆಗಮನದಿಂದ ಹುಣಸೂರು ಅಖಾಡ ರಂಗೇರಿದ್ದು, ಪಟಾಕಿ ಸಿಡಿಸಿ ಕಾರ್ಯಕರ್ತರು ವೆಲ್‌ಕಮ್ ಮಾಡಿದ್ದಾರೆ. ಸಿದ್ದರಾಮಯ್ಯಗೆ ಕೈ ಅಭ್ಯರ್ಥಿ ಸೇರಿ ಹಲವು ಮುಖಂಡರ ಸಾಥ್ ನೀಡಿದ್ದಾರೆ.

ಈ ವೇಳೆ ಅಂಗಟಹಳ್ಳಿ ಗೇಟ್ ಬಳಿ ಮಾತನಾಡಿದ ಸಿದ್ದರಾಮಯ್ಯ, ತಿಪ್ಪರಲಾಗ ಹಾಕಿದರೂ ವಿಶ್ವನಾಥ್ ಗೆಲ್ಲಲ್ಲ. ಸಿದ್ದರಾಮಯ್ಯ ಸಾರ್ವಜನಿಕ ಭಾಷಣದ ವೇಳೆ ಹುಣಸೂರು ಉಪಚುನಾವಣೆಯಲ್ಲೂ ತಿಪ್ಪರಲಾಗ ಪದ ಬಳಸಿದ್ದಾರೆ.  ಪಕ್ಷದಿಂದ ಪಕ್ಷಕ್ಕೆ ಹಾರುವುದು ಹಳ್ಳಿಹಕ್ಕಿ ವಿಶ್ವನಾಥ್ ‌ಕೆಲಸ.  ಕಳೆದ ಬಾರಿಯೇ ವಿಶ್ವನಾಥ್ ಸೋಲಬೇಕಿತ್ತು.  ಆದ್ರೆ ವಿಶ್ವನಾಥ್ ಗೆಲ್ಲಿಸೋದಕ್ಕೆ ಬಿಜೆಪಿ ಸಪೋರ್ಟ್ ಮಾಡಿತ್ತು.  ಈಗ ಜೆಡಿಎಸ್ ಅಭ್ಯರ್ಥಿ ಇದ್ದಾರೆ, ಅನರ್ಹ ಎನ್ನುವ ಕಳಂಕ ಹೊತ್ತಿರುವ ವಿಶ್ವನಾಥ್ ಕೂಡ ಇದ್ದಾನೆ.  ಮಂಜುನಾಥ್ ಹುಟ್ಟು ಕಾಂಗ್ರೆಸ್ಸಿಗ.  ಸೋತಾಗ, ಗೆದ್ದಾಗ ಎಲ್ಲ ಸಂದರ್ಭದಲ್ಲೂ ಜನರ ಜತೆ ಇದ್ದಾನೆ.  ಮಂಜುನಾಥ್ ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿದಂತೆ ಎಂದರು.

ಮಂಜುನಾಥ್ ಹುಟ್ಟಾ ಕಾಂಗ್ರೆಸಿಗ. ಹುಣಸೂರಿಗೆ ಸಾಕಷ್ಟು ಕೆಲಸ ಮಾಡಿದ್ದಾನೆ. ಕೆಲಸ ಮಾಡಿದವರನ್ನು ಗೆಲ್ಲಿಸಿ. ವಿಶ್ವನಾಥ್ ಗೆ ಈಗ ಅನರ್ಹ ಹಣೆಪಟ್ಟಿ ಇದೆ. ಅಂಗಟಹಳ್ಳಿ ಪ್ರಚಾರದಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಬಂದು ಏನ್ ಏನೋ ಸುಳ್ಳು ಹೇಳ್ತಾರೆ. ನನ್ನ ಪ್ರಕಾರ ತಿಪ್ಪರಲಾಗ ಹಾಕಿದರು ವಿಶ್ವನಾಥ್ ಗೆಲ್ಲಲ್ಲ. ಹೋದ ಸರಿ ಬಿಜೆಪಿ ಅಭ್ಯರ್ಥಿ ಹಾಕಿಲ್ಲ. ನೀವು ಶಕ್ತಿ ನನ್ನ ಶಕ್ತಿ. ನೀವಿದ್ದರೆ ನಾನು ನಾಯಕ. ಹೇಗಾದರೂ ಮಾಡಿ ನನ್ನ ಮೇಲೆ ಹಠ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ‌. ಮಂಜುನಾಥ್‌ಗೆ ಹಾಕುವ ಮತ ನನಗೆ ಹಾಕುವ ಮತ.

ಅಕ್ಕಿ ಕೊಟ್ಟವರು ನಾವು ಹಾಲು ಕೊಟ್ಟವರು ನಾವು. ವಿಶ್ವನಾಥ್‌ದೂ ಏನು ಕೊಡುಗೆ. ಪಕ್ಷದಿಂದ ಪಕ್ಷಕ್ಕೆ ಹಾರಿ ಹೋಗುವುದು ವಿಶ್ವನಾಥ್ ಕೆಲಸ. ಈ ಚುನಾವಣೆ ಬರೋಕೆ ಆ ವಿಶ್ವನಾಥ್ ಕಾರಣ. ಈ ಚುನಾವಣೆಯಲ್ಲಿ ಕಳಂಕ‌ ಹೊತ್ತ ವಿಶ್ವನಾಥ್ ಇದ್ದಾರೆ. ನಿಷ್ಟಾವಂತ ಮಂಜುನಾಥ್ ಇದ್ದಾರೆ. ಜೆಡಿಎಸ್‌‌ನ ಸೋಮಶೇಖರ್ ಇದ್ದಾರೆ‌. ನೀವು ಮಂಜುನಾಥ್‌ಗೆ ಆರ್ಶಿವಾದ ಮಾಡಿ. ಒಳ್ಳೆ ಕೆಲಸ ಮಾಡಿದವನು ನಮ್ಮ‌ ಮಂಜುನಾಥ. ವಿಶ್ವನಾಥ್  ನಿಮ್ಮನ್ನೆ ಮಾರಿಹೋದ, ಇದೆಲ್ಲ ಬರೀ ನಾಟಕ.
ವಿಶ್ವನಾಥ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ. ಈ ಬಾರಿ ಕಾಂಗ್ರೆಸ್ ಗೆ ವೋಟ್ ಹಾಕಬೇಕು. ನೀವೆ ಕೈ ಬಿಟ್ಟರೆ ಹೇಗೆ ಹೇಳಿ. ಎಂದಿನ ದಾಟಿಯಲ್ಲೇ ವಿಶ್ವನಾಥ್ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

Leave a Reply

Your email address will not be published.