ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದ ವೇಳೆ ಅಲುಗಾಡಿದ ಶವದ ತಲೆ…!

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದ ವೇಳೆ ಶವದ ತಲೆ ಅಲುಗಾಡಿದೆ. ಇದ್ರಿಂದ ಭಯಗೊಂಡ ಕೆಲವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕುಟುಂಬಸ್ಥರು ವ್ಯಕ್ತಿಯನ್ನು ಆಸ್ಪತ್ರೆ ಗೆ ಕರೆದೊಯ್ದಿದ್ದಾರೆ. ಚಿಕಿತ್ಸೆಯ ನಂತರ ವ್ಯಕ್ತಿ ಆರೊಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಪ್ಕಹಾಲ ಗ್ರಾಮದಲ್ಲಿ ಮಲಿಕ್ ಜ್ವರದಿಂದ ಬಳಲುತ್ತಿದ್ದ. ಜ್ವರ ಹೆಚ್ಚಾಗಿ ಮಲ್ಲಿಕ್ ಪ್ರಜ್ಞೆ ತಪ್ಪಿದ್ದನಂತೆ. ಶುಕ್ರವಾರ ಆಡುಗಳನ್ನು ಮೇಯಿಸಲು ಮಲ್ಲಿಕ್ ಕಾಡಿಗೆ ಹೋಗಿದ್ದನಂತೆ. ಆದ್ರೆ ರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ.

ಶನಿವಾರ ಮಲ್ಲಿಕ್ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿ ಸಿಕ್ಕಿದ್ದ. ಕುಟುಂಬಸ್ಥರು ಮಲ್ಲಿಕ್ ಮೃತಪಟ್ಟಿದ್ದಾನೆಂದು ಭಾವಿಸಿ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಸ್ಮಶಾನದಲ್ಲಿ ಶವದ ತಲೆ ಅಲುಗಾಡಿದೆ. ಆತನಿಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವಾಗಿದ್ದಾನೆಂದು ವೈದ್ಯರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights