ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆ : ಎರಡನೆ ದಿನಕ್ಕೆ ದಸರಾ ಸಡಗರ

ಎರಡನೆ ದಿನಕ್ಕೆ ದಸರಾ ಸಡಗರ ಕಾಲಿಟ್ಟಿದ್ದು ಮಹಿಳಾ ಮಣಿಗಳು ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮ ಪಡುತ್ತಿದ್ದಾರೆ. ಮಹಿಳೆಯರಿಗಾಗೇ ಆಯೋಜಿಸಿರುವ ನಾನಾ ಸ್ಪರ್ಧೆಗಳಲ್ಲಿ ಮಹಿಳೆಯರು ಪರಸ್ಪರ ಪೈಪೋಟಿಗಿಳಿದಿದ್ದಾರೆ.

ಇಂದು ಮೈಸೂರು ದಸರಾದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಶಾಸಕ ರಾಮದಾಸ್ ಅವರು ಓಂ ಎಂದು ರಂಗೋಲಿ ಬರೆಯುವ ಮೂಲಕ ಚಾಲನೆ ನೀಡಿದರು. ಈ ವೇಳೆ ಉದ್ಘಾಟನಾ ರಂಗೋಲಿಯಲ್ಲಿ ಬಿಜೆಪಿ ಕಮಲದ ಗುರುತು ಚಿತ್ರ ಬಿಡಿಸಲಾಗಿತ್ತು.

ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾಗಿರುವ 50 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ವರ್ಣರಂಜಿತವಾಗಿ ರಂಗೋಲಿ ಬಿಡಿಸಿ ಅರಮನೆ ಅಂಗಣದಲ್ಲಿ ರಾರಾಜಿಸಿದವು. ನೋಡುಗರ ಕಣ್ಮನ ಸೆಳೆದವು. ದಸರಾ ಕಾರ್ಯಕ್ರಮದಲ್ಲಿ ಬಿಜೆಪಿ ಬಣ್ಣ ಹಾಗೂ ಗುರುತುಗಳದ್ದೆ ದರ್ಬಾರ್ ನಡೆಯುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights