ಅನರ್ಹರ ಶಾಸಕರನ್ನು ಮಂತ್ರಿ ಮಾಡುತ್ತೇವೆ ಎನ್ನುವುದು ಗೆಲ್ಲುವ ತಂತ್ರ : ಯಡಿಯೂರಪ್ಪ ವಿರುದ್ಧ ದೇವೇಗೌಡ ಕಿಡಿ

ಸುಪ್ರಿಕೋರ್ಟ್ ತೀರ್ಪು ಬಂದ ಬಳಿಕ ಕೆಲವು ಅನರ್ಹ ಶಾಸಕರು ನಿರಾಳರಾದರೆ ಇನ್ನೂ ಕೆಲ ಶಾಸಕರು ಮುಂದಿನ ಉಪಚುನಾವಣೆಯಲ್ಲಿ ಸ್ಪರ್ಧಿಸಲೂ ಹಿಂದೆ ಸರಿಯುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಸಿಎಂ ಯಡಿಯೂರಪ್ಪ ನವರ ಬಿಗ್ ಆಫರ್. ಅದುವೇ ಬೇರೆ ಅಭ್ಯರ್ಥಿಗಳಿಗೆ ಗೆಲ್ಲಲು ಸಹಕಾರ ನೀಡಿದರೆ ಎಮ್ ಎಲ್ ಸಿ ಹಾಗೂ ಮಂತ್ರಿ ಸ್ಥಾನ ನೀಡುವ ಭರವಸೆ. ಇದೇ ಇದೊಂದೆ ಭರವಸೆ ಅನರ್ಹ ರಾಣೇಬೆನ್ನೂರು ಶಾಸಕ ಶಂಕರ್ ಹಾಗೂ ರೋಷನ್ ಬೇಗ್ ಉಪಚುನಾವಣೆಯಿಂದ ಹಿಂದೆ ಸರಿಯುವಂತ ನಿರ್ಧಾರಕ್ಕೆ ಬರುವಂತೆ ಮಾಡಿದರೆ.

ಆದರೆ ಯಡಿಯೂರಪ್ಪ ಅವರ ಈ ಆಫರ್ ನ್ನು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಜನರ ಬ್ರೈನ್ ವಾಶ್ ಮಾಡುವ ಕುತಂತ್ರ ಎಂದು ಕಿಡಿ ಕಾರಿದ್ದಾರೆ.  ಹಾಸನದಲ್ಲಿ ಮಾತನಾಡಿದ ದೇವೇಗೌಡರು, ಯಡಿಯೂರಪ್ಪ 15 ಅನರ್ಹ ಶಾಸಕರಿಗೂ ಮಂತ್ರಿ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ.

ಸೋಲುವ ಭೀತಿಯಿಂದ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ಹಾಗೆ ಹೇಳಿದರೆ ಚುನಾವಣೆ ಪಾವಿತ್ರ್ಯತೆ ಉಳಿಯುತ್ತಾ? ಸುಪ್ರೀಂಕೋರ್ಟ್ ಒಂದೆಡೆ ಅನರ್ಹತೆ ಎತ್ತಿ ಹಿಡಿದಿದೆ. ಮತ್ತೊಂದೆಡೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದೆ. ಇನ್ನೂ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಿಲ್ಲ, ಗೆದ್ದೂ ಇಲ್ಲ. ಈಗಲೇ ಅವರನ್ನು ಮಂತ್ರಿ ಮಾಡುತ್ತೇವೆ ಎನ್ನುವುದು ಗೆಲ್ಲುವ ತಂತ್ರ.ಮಂತ್ರಿ ಮಾಡುತ್ತೇವೆಂದರೆ ಜನ ಮತ ಹಾಕುತ್ತಾರೆ ಎಂದು ಬಿಎಸ್​ವೈ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights