ಅಪ್ರಾಪ್ತ ಬಾಲಕಿಯ ತಲೆ ಕೆಡಿಸಿ ವಿವಾಹಿತ ವ್ಯಕ್ತಿ ಪರಾರಿ : ಕಂಗಾಲಾದ ಕುಟುಂಬಸ್ಥರು

ಅಪ್ರಾಪ್ತ ಬಾಲಕಿಯ ತಲೆ ಕೆಡಿಸಿ ಬಾಲಕಿಯೊಂದಿಗೆ ವಿವಾಹಿತ ವ್ಯಕ್ತಿ ಪರಾರಿಯಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಡಾಣಹಳ್ಳಿ ಗ್ರಾಮದಲ್ಲಿ ನಡೆದಿದೆ.

ಡಾಣಹಳ್ಳಿ ಗ್ರಾಮದ ಸೋನು (೧೭) ವಿವಾಹಿತ ವ್ಯಕ್ತಿಯೊಂದಿಗೆ ಪರಾರಿಯಾಗಿರೋ ಅಪ್ರಾಪ್ತ ಬಾಲಕಿ. ಬಿದರಹಳ್ಳಿ ಗ್ರಾಮದ ಪ್ರಕಾಶ್ ಮದುವೆಯಾಗಿ ಎರಡು ಮಕ್ಕಳಿದ್ರು‌ ಸೋನು ಜೊತೆ ಪರಾರಿಯಾಗಿದ್ದಾನೆ.

ಅಪ್ರಾಪ್ತ ಬಾಲಕಿ ಪೋಷಕರಿಂದ ಪೊಲೀಸರಿಗೆ ಅಪ್ರಾಪ್ತೆಯ ತಲೆಕೆಡೆಸಿ ಅಪಹರಿಸಿರೋದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಪಹರಿಸೋದು ಅಲ್ದೆ ಅಪ್ರಾಪ್ತೆ‌ ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿರೋ‌ ಆರೋಪ ಮಾಡಲಾಗಿದೆ.

ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights