ಈ‌ ಸರಕಾರಕ್ಕೆ ಕಣ್ಣು- ಮೂಗು ಏನು ಇಲ್ಲ, ದಪ್ಪ ಚರ್ಮವಿದೆ – ಸಿದ್ದರಾಮಯ್ಯ ಕಿಡಿ

ರಾಯಚೂರು ಜಿಲ್ಲೆಯಲ್ಲಿ ನೆರೆ ವೀಕ್ಷಣೆಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.

ಕೇಂದ್ರ ಸರಕಾರವು ಶೇ ೧೦ ರಷ್ಟು ಮೀಸಲಾತಿ ನೀಡಿದೆ. ಆದರೆ ಲೋಕಸಭಾ ಚುನಾವಣೆಯ ನಂತರ ಮಾಡಿಲ್ಲ. ಈಗ ಮಾಡಲಿ ನಮ್ಮ‌ ತಕರಾರು ಇಲ್ಲ. ಬಿಜೆಪಿ ಸರಕಾರ ಮಾಡಲು ೧೦೫ ಜನರಿದ್ದು ಮೇನಾರಟಿ, ಅನೈತಿಕವಾಗಿ ಮಾಡಿರುವ ಸರಕಾರ, ನಮ್ಮ ಹಾಗು ಜೆಡಿಎಸ್ ಆಸೆ ತೋರಿಸಿ ಅಧಿಕಾರಕ್ಕೆ ಬರಲಿದ್ದಾರೆ ಎಂದಿದ್ದಾರೆ.

೧೫ ಜನರ ಉಪಚುನಾವಣೆಯಲ್ಲಿ ನಾವೇ ಗೆಲ್ತೇವೆ. ಇದರಿಂದ ಮತ್ತೆ ಮದ್ಯಂತರ ಚುನಾವಣೆ ಬರುತ್ತೆ ಎನ್ನುವ ಲೆಕ್ಕಾಚಾರವಿದೆ. ಜೆಡಿಎಸ್ ನೊಂದಿಗೆ ಹೋಗುತ್ತೇವೆ, ಚುನಾವಣಾ ಬರಬಹದು. ಜೆಡಿಎಸ್ ಹಾಗು ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲಿಕ್ಕಿಲ್ಲ.

ಕೇಂದ್ರ ಹಾಗು ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಬರ ಪರಿಹಾರ, ಮನೆ ಬಿದ್ದವರಿಗೆ ಮನೆ ನೀಡುತ್ತಿಲ್ಲ.ಈ‌ ಸರಕಾರ, ಕಣ್ಣು ಮೂಗು ಏನು ಇಲ್ಲ, ದಪ್ಪ ಚರ್ಮವಿದೆ. ಕೇಂದ್ರ ಸರಕಾರ ನೆರೆಯ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಘೋಷಿಸಬೇಕಿತ್ತು. ನರೇಂದ್ರ ಮೋದಿ ಪ್ರವಾಹ ಬಂದಾಗ ಒಮ್ಮೆಯಾದರೂ ಬರಬೇಕಿತ್ತು. ಹಿಂದೆ ಮನ್ ಮೋಹನಸಿಂಗ್ ನೆರೆ ಬಂದಾಗ ಇಲ್ಲಿಗೆ ಬಂದು ಮಧ್ಯಂತರ ಪರಿಹಾರ ಘೋಷಿಸಿದ್ದರು.

ಯಡಿಯೂರಪ್ಪ ನಿಮಗೆ ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆದುಕೊಂಡು ಹೋಗಿ. ವಿಧಾನಸಭಾ ಸಭೆಯನ್ನು ಬೆಳಗಾವಿಯಲ್ಲಿ ನಡೆಸಬೇಕು. ಇಲ್ಲಿಯ ನೆರೆ ಸಂತ್ರಸ್ತರಿಗೆ ನೀಡಬೇಕಾಗಿತ್ತು. ೧೦ ಸಾವಿರ ರೂಪಾಯಿಯನ್ನು ನೆರೆ ಸಂತ್ರಸ್ತರಿಗೆ ಸರಿಯಾಗಿ ನೀಡಿಲ್ಲ. ಯಡಿಯೂರಪ್ಪ ತಂತಿಯ ಮೇಲೆ ಯಾಕೆ ನಡೆಯುತ್ತಿರಿ.

ಯಾಕೆ ತಂತಿ ಮೇಲೆ ನಡೆತಿರಿ ರಾಜಿನಾಮೆ ಕೊಡಿ ಯಾಕೆ ತಂತಿ ಮೇಲೆ ನಡೆದು ಬಿದ್ದು ಹೋಗ್ತೀರಿ. ನೆರೆ ಪರಿಹಾರ ಕೇಳುವ ಧೈರ್ಯವಿಲ್ಲ, ಯಡಿಯೂರಪ್ಪ ಕಂಡರೆ ಅಯ್ಯೋ ಅನ್ನುತ್ತೆ. ರೆಕ್ಕೆ ಪುಕ್ಕಗಳನ್ನು ಕತ್ತರಿಸುತ್ತಿದ್ದಾರೆ.

ನಾನೇ ಶಾಸಕಾಂಗ ಪಕ್ಷದ ನಾಯಕ, ನಮ್ಮ ಅಧ್ಯಕ್ಷ ವಿರೋಧ ಪಕ್ಷ ನಾಯಕ ಬೇಕು ಎಂದು ಪತ್ರ ಬರೆಯಬೇಕಿತ್ತು. ಈಗ ಹೈಕಮಾಂಡಿನ ಕೇಳಬೇಕು. ಹೈಕಮಾಂಡ ವಿರೋಧ ಪಕ್ಷ ನಾಯಕ ಮುನಿಯಪ್ಪ ಸೇರಿದಂತೆ ನನ್ನ ವಿರುದ್ದವಲ್ಲ. ಟಿವಿಗಳಲ್ಲಿ ಬರೋದೆಲ್ಲ ನಂಬ ಬೇಡಿ. ನಾನೇ ಪಕ್ಷದ ವಿಷಯವನ್ನು ಪಬ್ಲಿಕ್ ಸ್ಥಳದಲ್ಲಿ ಮಾತನಾಡುವುದಿಲ್ಲ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights