ಉದ್ಯಮಿ ಪುತ್ರನ ಅಪಹರಣಕಾರರ ಬಂಧನ : ಕಡಬಗೆರೆ ಬಳಿ ಇನ್ಸ್ ಪೆಕ್ಟರ್ ಸತ್ಯನಾರಾಯಣರವರಿಂದ ಶೂಟೌಟ್!

ಉದ್ಯಮಿ ಸಿದ್ದರಾಜು ಅವರ ಮಗ ಮತ್ತು ಕಾರು ಚಾಲಕನನ್ನು ಅಪಹರಿಸಿ1.80 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳ ಕಾಲಿಗೆ ನಗರದ ಹೊರವಲಯದ ಕಡಬಗೆರೆ ಬಳಿ ಪೊಲೀಸರು ಗುಂಡು ಹೊಡೆದಿದ್ದಾರೆ.

ಅಪಹರಣಕಾರ ಸಂಗುಬಾಳ ಪ್ರಶಾಂತ್, ಸತೀಶ್ ಎಂಬುವವರ ಬಂಧನಕ್ಕೆ ವಿಶೇಷ ತಂಡದ ರಚನೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾದಗಾ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮಾದನಾಯಕನಹಳ್ಳಿ ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರು ಗುಂಡು ಹೊಡೆದಿದ್ದಾರೆ.

ಮಾದನಾಯಕನಹಳ್ಳಿ ಇನ್ಸ್ ಪೆಕ್ಟರ್ ಸತ್ಯನಾರಾಯಣ್, ರಾಜಾನುಕುಂಟೆ ಪಿ.ಎಸ್.ಐ ಮುರುಳೀಧರ್, ಆನೇಕಲ್ ಪಿ.ಎಸ್.ಐ ಹೇಮಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights