ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ ಆದ್ರೂ ಸರಕಾರ ರಚನೆಗೆ ಪರದಾಟ ತಪ್ಪಲಿಲ್ಲ..

ಅದೇನು ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ. ಬಿಜೆಪಿ ಕರ್ನಾಟದಲ್ಲಿ ಸರ್ಕಾರ ರಚನೆ ಮಾಡಬೇಕಾದ್ರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲಾ. ಆಪರೇಷನ್ ಕಮಲ ಮಾಡುತ್ತೇ.. ಮಾಡುತ್ತೇ.. ಅಂದುಕೊಂಡು.. ಅಂದುಕೊಂಡು ಎಲ್ಲರೂ ಒಂದು ದಿನ ಬಿಜೆಪಿ ಅವರು ಏನೂ ಮಾಡುವುದಿಲ್ಲ ಬಿಡಿ ಅಂತ ಸುಮ್ನೆ ಕುಳಿತುಕೊಂಡಾಗ ಅತೃಪ್ತ ಶಾಸಕರನ್ನ ಬೆಳಕಿಗೆ ತಂದು ಸರ್ಕಾರ ರಚನೆ ಮಾಡೇ ಬಿಡ್ತು.

ಆದ್ರೇ ಮಹಾರಾಷ್ಟ್ರದಲ್ಲಿ ಬಿಜೆಪಿದು ಬೇರೆದ್ದೇ ಕಥೆ. ಮೂರೇ ಮೂರು ದಿನಕ್ಕೆ ಬಿಜೆಪಿ ಸರ್ಕಾರ ಉರುಳಿ ಬಿದ್ದಿದೆ. ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸಂಜೆ 5 ಗಂಟೆಯ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿತ್ತು. ಈ ಆದೇಶದ ಬಳಿಕ ಸಂಖ್ಯಾಬಲ ಇಲ್ಲದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.

ಹೌದು… ಕರ್ನಾಟಕದಲ್ಲೂ ಬಿಜೆಪಿಗೆ 105… ಮಹಾರಾಷ್ಟ್ರದಲ್ಲಿ ಯು ಬಿಜೆಪಿಗೆ 105… ಎರಡೂ ಕಡೆ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ರು ಸರಕಾರ ರಚನೆಗೆ ಬಿಜೆಪಿ ಗೆ ಪರದಾಟ ತಪ್ಪಲಿಲ್ಲ.

ಇದು ವಿಚಿತ್ರ ಅಲ್ಲವೇ…? ಇನ್ನು ಅಂದು ಯಡಿಯೂರಪ್ಪ ಇಂದು ಫಡ್ನವೀಸ್ ಮುಖ್ಯಮಂತ್ರಿಗಳಾದ ಒಂದೆರಡು ದಿನಗಳಿಗೆ ರಾಜೀನಾಮೆ ಸಲ್ಲಿಸಿದರು. ಇದೂ ಎಂತಹ ಸಾಮ್ಯತೆ ಅಲ್ಲವೇ…?  ಆದರೆ, ಒಂದೇ ವ್ಯತ್ಯಾಸ…ಆಗ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಇರಲಿಲ್ಲ…ಈಗ ಫಡ್ನವೀಸ್ ಅವರಿಗೆ ಹೈ ಕಮಾಂಡ್ ಕೃಪಾಶೀರ್ವಾದ ಇತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights