ಕುದುರೆ ಟಾಂಗ ಗಾಡಿಯಲ್ಲಿ ಮೈಸೂರು ಸುತ್ತಿದ ನಟ ಜಗ್ಗೇಶ್….

ಮೈಸೂರಿನಲ್ಲಿ ಕಳೆದ ಹಳೆಯ ನೆನಪುಗಳನ್ನು ಕಾಮಿಡಿ ಜಗ್ಗೇಶ್ ಮೆಲಕು ಹಾಕಿದ್ದಾರೆ. ಅದು ಹೇಗೆ ಗೊತ್ತಾ ಮೈಸೂರನ್ನು ಸುತ್ತು ಹಾಕುವ ಮೂಲಕ. ಅರೇ ಅದೇನು ಯಾರ ಕಣ್ಣಿಗೂ ಬಿದ್ದಿಲ್ಲ ಮತ್ತೆ ಅಂತ ಯೋಚನೆ ಮಾಡಬೇಡಿ. ಹೀಗೊಂದು ವಿಚಾರವನ್ನ ನಟ ಜಗ್ಗೇಶ್  ಶೇರ್ ಮಾಡಿದ್ದಾರೆ. ಅದು ಯಾರಿಗೂ ಕೂಡ ಕಾಣದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮೈಸೂರು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಜಗ್ಗೇಶ್.

ಹೌದು…  ಕುದುರೆ ಟಾಂಗ ಗಾಡಿಯಲ್ಲಿ ಸಾರ್ವಜನಿಕರಿಗೆ ತಿಳಿಯದಂತೆ ಮೈಸೂರು ನಗರ ಸಂಚಾರ ಮಾಡಿದ್ದಾರೆ. ಈ ಫೋಟೋ ವಿಡಿಯೋಗಳನ್ನು ಫೇಸ್ ಬುಕ್ ಮುಖಾಂತರ ಬಾಲ್ಯದ ಸಂತಸ ಹಂಚಿಕೊಂಡಿದ್ದಾರೆ.
ಕೆ.ಆರ್.ಸರ್ಕಲ್ ಮುಖಾಂತರ ಟಾಂಗ್ ಗಾಡಿ ಏರಿ  ಜಯಚಾಮರಾಜೇಂದ್ರ ವೃತ್ತದಲ್ಲಿ ನಡೆದುಕೊಂಡು ಸುತ್ತಾಡಿದ್ದಾರೆ.

ಮೈಸೂರಿಗೆ ರಾಜಣ್ಣನ ಸಿನಿಮಾ ನೋಡಲು ಬರುತ್ತಿದ್ದೆ. ಅಮ್ಮನ ಜೊತೆ ಶ್ರೀರಾಮಪುರದಿಂದ ನವರಂಗ ಚಿತ್ರಮಂದಿರಕ್ಕೆ ಹೋಗಿದ್ದೆ, ಅಲ್ಲಿ ಕೃಷ್ಣದೇವರಾಯನ ಚಿತ್ರ ನೋಡಿದ್ದ ನೆನಪು ಕಾಡಿತು ಎಂದು ಬಾಲ್ಯದ ದಿನಗಳನ್ನು ಹಂಚಿಕೊಂಡಿದ್ದಾರೆ. ನಾವು ಮಕ್ಕಳಂತೆ ಸಂತೋಷವಾಗಿ ಬದುಕಬಹುದು ಎಂದು
ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಗೆ ಪೋಸ್ಟ್ ಹಾಕಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights