ಕೆಜಿಎಫ್ ಸಿನೆಮಾ ಸೆಟ್ ಎದುರು ಕಾರ್ಮಿಕರ ಪ್ರತಿಭಟನೆ…!

ಕೆಜಿಎಫ್ ಸಿನೆಮಾ ಸೆಟ್ ಎದುರು ಕಾರ್ಮಿಕರು ಪ್ರತಿಭಟನೆ ಕೈಗೊಂಡಿದ್ದಾರೆ. ಕೆಜಿಎಫ್ ನಗರದ ಕೆನಡಿಸ್ ಸೈನೈಡ್ ಗುಡ್ಡದಲ್ಲಿರೋ ಸಿನೆಮಾ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಆದರೆ ಇಂದು ಕೆಜಿಎಫ್ ಸಿನೆಮಾ ಸೆಟ್ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ನೆನ್ನೆಯಷ್ಟೇ ಕೆಜಿಎಫ್ 2 ಶೂಟಿಂಗ್ ನಡೆಸದಂತೆ ನ್ಯಾಯಾಲಯ ತಡೆಯಾಜ್ಞೆ ಹೊರಡಿಸಿತ್ತು. ಸಿನೆಮಾ ತಂಡ ಸದ್ಯ ನ್ಯಾಯಾಲಯದ ಆದೇಶ ಮೇರೆಗೆ ಸೆಟ್ ತೆರವು ಮಾಡುತ್ತಿದೆ. ಚಿತ್ರೀಕರಣ ಸ್ಥಗಿತ ಆದ್ರೆ ಕೂಲಿ ಹಣ ತಪ್ಪುವ ಭೀತಿಯಲ್ಲಿ ನೂರಾರು ಸ್ಥಳೀಯ ಕಾರ್ಮಿಕರು, ಸಿನಿಮಾ ಶೂಟಿಂಗ್ ಸ್ತಗಿತ ಮಾಡಬಾರದೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಚಿತ್ರೀಕರಣ ತಂಡ ಕೆಜಿಎಪ್ ಚಾಪ್ಟರ್ ೨ ಕ್ಲೈಮ್ಯಾಕ್ಸ್ ಗಾಗಿ ಬೃಹತ್ ಸೆಟ್ ಹಾಕಿದ್ದನ್ನ ಸದ್ಯ ತೆರುವುಗೊಳಿಸುತ್ತಿದೆ.  ಇದನ್ನೇ ನಂಬಿಕೊಂಡಿದ್ದ ಮಹಿಳೆಯರು, ನೂರಾರು ಕಾರ್ಮಿಕರಿಂದ ಸೆಟ್ ಬಳಿ ಪ್ರತಿಭಟನೆ ಮಾಡಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights