ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆ : ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷದ ವರಿಷ್ಠರ ಗೊಂದಲ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಉಪ ಚುನಾವಣೆ ಘೋಷಣೆಯಿಂದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮೂರು ಪಕ್ಷದಲ್ಲೂ ಅಭ್ಯರ್ಥಿ ಆಯ್ಕೆ ಅಂತಿಮ ಆಗದಿದ್ರು ಚುನಾವಣೆ ಸಿದ್ದತೆ ಜೋರಾಗೆ ನಡೀತಿದೆ.ಜೆಡಿಎಸ್ ನಲ್ಲಿ ಆಕಾಂಕ್ಷಿಗಳ ಹೆಚ್ಚಾಗಿದ್ರೆ,ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇರೋ ಇಬ್ಬರಲ್ಲಿ ಯಾರಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ‌. ಕೆ.‌ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆ ಸಿದ್ದತೆ ಕುರಿತ ಒಂದು ವರದಿ ಇಲ್ಲಿದೆ.

ಹೌದು ! ಅನರ್ಹ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಒಂದಾದ ಸಕ್ಕರೆನಾಡು ಮಂಡ್ಯದಲ್ಲಿ ಉಪ ಚುನಾವಣೆ ಘೋಷಣೆಯಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮೂರು ಪಕ್ಷದವರು ಒಲ್ಲದ ಮನಸ್ಸಿನಿಂದಲೇ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಅದ್ರಲ್ಲೂ ಜೆಡಿಎಸ್ ಪಕ್ಷದ ವರಿಷ್ಠರು ಈ ಬಾರಿ ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಟೀಕೇಟ್ ನೀಡಲಾಗುವುದು ಎಂದಿರೋದ್ರಿಂದ ನಿಂದ
ಕ್ಷೇತ್ರದಲ್ಲಿ ಐವರು ಸ್ಥಳೀಯ ನಾಯಕರು ಟಿಕೇಟ್ ಗಾಗಿ ದಂಬಾಲು ಬಿದ್ದಿದ್ದಾರೆ.‌ಜಿ.ಪಂ‌. ಸದಸ್ಯರಾದ ಬಿ.ಎಲ್. ದೇವರಾಜು, ಎಚ್. ಮಂಜು, ತಾ.ಪಂ.‌ಸದಸ್ಯ ರಾಜಾಹುಲಿ, ಮಾಜಿ ನಗರಸಭೆ ಅಧಕ್ಷ ಕೆ.ಟಿ. ಗಂಗಾಧರ್ ಸೇರಿದಂತೆ ಬಸ್ ಕೃಷ್ಣೇಗೌಡ ತೀವ್ರ ಪ್ರಯತ್ನ ಮಾಡ್ತಿದ್ದಾರೆ. ಇವ್ರೆಲ್ಲೂ ಟಿಕೇಟ್ ಗೆ ಆಕಾಂಕ್ಷಿತರಾಗಿದ್ರು, ದೇವೇಗೌಡ್ರು ಕುಟುಂಬದವರು ಯಾರಿಗೆ ಕೊಟ್ಟರು ನಾವು ಪಕ್ಷದ ಪರವಾಗಿ ದುಡಿಯಲು ಸಿದ್ದ ಅಂತಿದ್ರು.ಒಳಗೆ ಮಾತ್ರ ದೇವೇಗೌಡ್ರ ಕುಟುಂಬದವರೇ ಸ್ಪರ್ಧೆಗೆ ಒತ್ತಡ ಹಾಕ್ತಿದ್ದಾರೆ.

ಇನ್ನು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೂ ಕೂಡ ಅಭ್ಯರ್ಥಿ ಯಾರು ಅಂತಾ ಇನ್ನು ಅಂತಿಮವಾಗಿಲ್ಲ. ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಬಯಸಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಕರೆದು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ನ ಟಿಕೇಟ್ ಗಾಗಿ ಮಾಜಿ ತಾ.ಪಂ. ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಕೂಡ ಪ್ರಬಲ ಪೈಪೋಟಿ ನೀಡ್ತಿದ್ದಾರಾದ್ರು ಚಂದ್ರಶೇಖರ್ ಗೆ ಬಹುತೇಕ ಟಿಕೇಟ್ ನೀಡೋದು ಖಚಿತವಾಗಿದೆ.ಈ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಮಾತನಾಡಿ ಟಿಕೇಟ್ ಫೈನಲ್ ಮಾಡೋದಾಗಿ ಚಂದ್ರಶೇಖರ್ ಹೇಳ್ತಿದ್ದು ಈ ಬಾರಿ ಕಾಂಗ್ರೆಸ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಬಿಜೆಪಿಯಲ್ಲಿ ಹೆಚ್ಚಾಗಿ ಅಭ್ಯರ್ಥಿ ಆಯ್ಕೆಯಲ್ಲು ಗೊಂದಲ ಹೆಚ್ಚಾಗಿ ಕಾಣ್ತಿದೆ. ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತು ಕೇಳಿ ಬರ್ತಿದ್ರು, ಸುಪ್ರೀಂಕೋರ್ಟ್ ತೀರ್ಪಿನ‌ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ. ಸುಪ್ರೀಂಕೋರ್ಟ್ ತೀರ್ಪು ಕೊಟ್ಟರೆ ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾರೆ. ಇಲ್ದಿದ್ರೆ ಯಾರು ಅನ್ನೋ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಒಂದ್ವೇಳೆ ತೀರ್ಪು ನಾರಾಯಣ ಗೌಡ ಪರವಾಗಿ ಬರದಿದ್ರೆ, ಪತ್ನಿ ದೇವಕಿ ಇಲ್ಲ ನಾರಾಯಣಗೌಡ ಸೂಚಿಸಿದ ವ್ಯಕ್ತಿ ಅಭ್ಯರ್ಥಿಯಾಗಬಹುದಾದ್ರು ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ನಿಂತಿರೋ ಬಿಜೆಪಿ ಕಡೆ ಕ್ಷಣದಲ್ಲಿ ಸಿ.ಎಂ.ಪುತ್ರ ವಿಜಿಯೇಂದ್ರ ಕರೆತರಲು ಚಿಂತನೆಯಲ್ಲಿರೋದಾಗಿ ಬಿಜೆಪಿ ಮುಖಂಡರು ತಿಳಿಸಿದ್ದು ಮೊದಲ ಆಯ್ಕೆ ನಾರಾಯಣಗೌಡರೇ ಎಂದಿದ್ದಾರೆ.

ಒಟ್ಟಾರೆ ಸಕ್ಕರೆನಾಡು‌ ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಡೆಯುತ್ತಿರೋ ಈ ಉಪ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆ ತಂದಿಟ್ಟಿದೆ.ಆದ್ರೆ ಮೂರು ಪಕ್ಷದಿಂದ ಅಧಿಕೃತ ಅಭ್ಯರ್ಥಿ ಯಾರೋ ಅನ್ನೋ ಗೊಂದಲ ಕಾರ್ಯಕರ್ತರಲ್ಲಿ ಮೂಡಿಸಿರೋದಂತು ಸುಳ್ಳಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights