ಕೋಡಿ ಬಿದ್ದ ಕೆರೆ : ಜಲಾವೃತಗೊಂಡ ಶಾಲೆ – ಸ್ಕೂಲಿಗೆ ಹೋಗಲು ಶಿಕ್ಷಕರ, ಮಕ್ಕಳ ಹರಸಾಹಸ

ದಾವಣಗೆರೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಕೆರೆ ಒಡೆದು ಅಪಾರ ಪ್ರಾಣದ ನೀರು ಹರಿದು ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾವಣಗೆರೆ ‌ನಗರದ ಹೊರವಲಯದ ಬಾತಿ ಕೆರೆಗೆ ಬಿದ್ದ ಕೋಡಿಯಿಂದಾಗಿ ನೂರಾರು ಎಕರೆ ಭತ್ತದ ಗದ್ದೆಗೆ‌ ನೀರು ನುಗ್ಗಿದ್ದು ಶಾಲೆಗೂ ಕೂಡ ನೀರು ನುಗ್ಗಿ ಶಾಲೆಗೆ ಹೋಗಲು ಮಕ್ಕಳು ಹರಸಾಹಸ ಪಡುತ್ತಿದ್ದಾರೆ.

ಹೌದು.. ಹೆಬ್ಬಾಳ ಗ್ರಾಮದ ಶ್ರೀ ರುದ್ರೇಶ್ವರ ಪ್ರೌಢಶಾಲೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸ್ಕೂಲಿಗೆ ಹೊಗಲು ಪಜೀತಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ೪ ರ ಪಕ್ಕದಲ್ಲಿರುವ ಶಾಲೆಗೆ ಹೋಗಲು ಶಾಲೆಗೆ ಹೋಗಲು ಮಕ್ಕಳು ಶಿಕ್ಷಕರು ಹೈರಾಣಾಗಿದ್ದಾರೆ.

ದಾವಣಗೆರೆ ತಾಲೂಕಿನಲ್ಲಿ ನಿನ್ನೆ ರಾತ್ರಿ ಕೂಡ ಮಳೆಯಾದ ಹಿನ್ನೆಲೆಯಲ್ಲಿ ಈ ಕೆರೆ ಭರ್ತಿಯಾಗಿದೆ. ಪರಿಣಾಮ ಕೆರೆಯಿಂದ ಅಪಾರ ಪ್ರಮಾಣಾದ ನೀರು ಹರಿದು ಹೋಗುತ್ತಿದೆ. ಕೋಡಿ ಬಿದ್ದ ಕೆರೆಯಲ್ಲಿ ಭರ್ಜರಿ ಮೀನುಗಾರಿಕೆ ಕೂಡ ಮಾಡಲಾಗುತ್ತಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights