ಕ್ರೀಡಾಂಗಣಕ್ಕೆ ನೀಡಿದ ಅನುದಾನ ದುರ್ಬಳಕೆ : ಪ್ರಾದೇಶಿಕ ಆಯುಕ್ತರಿಂದ ಗಂಭೀರ ಆರೋಪ

ಇದು ದೇಶದಲ್ಲಿ ಯೇ ಅತ್ಯಂತ ಜಿಲ್ಲೆ, ಇಲ್ಲಿ ಕ್ರೀಡಾಪಟುಗಳಿಗಾಗಿ ಸುಸಜ್ಜಿತ ಕ್ರೀಡಾಂಗಣ ಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ, ಆದರೆ ಆನುದಾನ ದುರ್ಬಳಿಕೆಯಾಗಿದೆ, ಈ ರೀತಿಯಾಗಿ ಆರೋಪ ಮಾಡಿದ್ದು ಪ್ರಾದೇಶಿಕ ಆಯುಕ್ತರು, ನಾಲ್ಕು ವರ್ಷವಾದರೂ ಪೂರ್ಣಗೊಳ್ಳದ ಈ ಕ್ರೀಡಾಂಗಣವನ್ನು ಹಿಂದಿನ‌ ಮುಖ್ಯಮಂತ್ರಿ ಗಳು ಉದ್ಘಾಟನೆ ಮಾಡಿದ್ದಾರೆ, ಹಾಗಾದರೆ ಯಾವ ಜಿಲ್ಲಾ ಕ್ರೀಡಾಂಗಣ ಎಂಬುವುದಕ್ಕೆ ಈ ವರದಿ ನೋಡಿ..

ಹೀಗೆ ಅರೆಬರೆಯಾಗಿ ನಡೆಯುತ್ತಿರುವ ಕ್ರೀಡಾಂಗಣದ ಕಾಮಗಾರಿ, ಇನ್ನೊಂದು ಕಡೆ ಅಲ್ಲಲ್ಲಿ ಪುಂಡ‌ಪೋಕರಿಗಳು ಕುಡಿದು ಬಿಟ್ಟು ಹೋಗಿರುವ ಖಾಲಿ ಬಾಟಲಿಗಳು, ಈ ದೃಶ್ಯ ಕಂಡು ಬರುವುದು ಜಿಲ್ಲಾ ಕೇಂದ್ರವಾಗಿರುವ ರಾಯಚೂರು ನಗರದಲ್ಲಿ, ರಾಯಚೂರು ಜಿಲ್ಲೆಯೂ ದೇಶದಲ್ಲಿಯೇ ಅತ್ಯಂತ ಹಿಂದುಳಿದ ಎಂಬ ಅಪಖ್ಯಾತಿ ಹೊಂದಿದೆ, ಈ ಜಿಲ್ಲೆಯ ಹಿಂದುಳಿಯಲು ಇಲ್ಲಿಗೆ ಸರಿಯಾದ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದಲ್ಲ, ಇಲ್ಲಿಗೆ ಸಾಕಷ್ಟು ಅನುದಾನ ಬರುತ್ತದೆ ಆದರೆ ಅನುದಾನ ಬಳಕೆಯಾಗಿ ಸರಿಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ, ಈ ಆರೋಪವನ್ನು ಸ್ವತಃ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸುಬೋಧ ಯಾದವರು ಕ್ರೀಡಾಂಗಣ ಪರಿಶೀಲಿಸಿದ ನಂತರ ಕಾಮಗಾರಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದರು, ನಾಲ್ಕು ವರ್ಷದ ಹಿಂದೆ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸುಸಜ್ಜಿತವಾದ ಕ್ರೀಡಾಂಗಣಕ್ಕೆ ೧೩ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ, ನಾಲ್ಕು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಈಗ ಮಾಡುತ್ತಿರುವ ಕಾಮಗಾರಿ ಕಳಪೆಯಾಗಿದೆ ಎನ್ನಲಾಗಿದೆ, ನಗರದ ಹೃದಯಭಾಗದಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ವನ್ನು ಗುಣಮಟ್ಟದ ಕಾಮಗಾರಿ ಮಾಡಬೇಕು, ಬೇಗ ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಕ್ರೀಡಾಂಗಣವು ಪುಂಡಪೋಕರಿಗಳ ತಾಣವಾಗುತ್ತಿದೆ ಎಂದು ಜನತೆ ಆಗ್ರಹಿಸಿ ದ್ದಾರೆ.

ನಾಲ್ಕು ಮೀಟರು ಸುತ್ತಳತೆಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣ ಕಾಮಗಾರಿಗಳು ಕಳಪೆಯಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಸಭೆ ನಡೆಸಿ ಪರಿಶೀಲಿಸಿ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ, ಜಿಲ್ಲಾಧಿಕಾರಿ ಕ್ರಮ ಏನಾಗಿರುತ್ತೊ ಅದರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.

೨೦೧೮ ರ ಚುನಾವಣೆಯ ಮುನ್ನ ೨೦೧೮ರ ಫೆಬ್ರುವರಿ ೨೭ ರಂದು ಅಪೂರ್ಣವಾಗಿದ್ದರೂ ಅಂದಿನ ಮುಖ್ಯಮಂತ್ರಿ ಗಳು ಕ್ರೀಡಾಂಗಣ ಉದ್ಘಾಟಿಸಿದ್ದರು, ಉದ್ಘಾಟನೆಯಾಗಿ ೨೦ ತಿಂಗಳಾದರೂ ಕ್ರೀಡಾಪಟುಗಳ ಬಳಕೆಗೆ ಸಿದ್ದವಾಗಿಲ್ಲ, ಇದೆಲ್ಲವನ್ನು ನೋಡಿದರೆ ರಾಯಚೂರು ಜಿಲ್ಲೆ ಹಿಂದುಳಿಯಲು ಇಲ್ಲಿಯ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳೇ ಕಾರಣ ಎಂದು ಜನತೆ ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights