ಜಿ.ಟಿ.ದೇವೆಗೌಡರು ಜೆಡಿಎಸ್ ಬಿಟ್ಟೋಗಿಲ್ಲ – ಪ್ರಜ್ವಲ್ ರೇವಣ್ಣ ಸ್ಪಷ್ಟನೆ

ಜಿ.ಟಿ.ದೇವೆಗೌಡರು ಜೆಡಿಎಸ್ ಬಿಟ್ಟೋಗಿಲ್ಲ. ಅವರು ಜೆಡಿಎಸ್ ಬಿಟ್ಟೋಗೋ ಪರಿಸ್ಥಿತಿಯೂ ಬಂದಿಲ್ಲ. ಇನ್ನೆರಡು ದಿನದಲ್ಲಿ ನಾನೇ ಜಿಟಿಡಿರನ್ನ ಭೇಟಿ ಮಾಡಿ ಪ್ರಚಾರಕ್ಕೆ ಕರೆ ತರುತ್ತೇನೆ ಎಂದು ಹುಣಸೂರು ಉಪಚುನಾವಣೆಯಲ್ಲಿ ಭಾಷಣ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಜಟಿಡಿಯವರು ಜೆಡಿಎಸ್‌ನಿಂದ ದೂರಾಗಿಲ್ಲ. ಅವರು ತಿರುಪತಿಗೆ ತೆರಳಿದ್ರು. ಅವರ ಫಾಲೋವರ್‌ಗಳು ಜೆಡಿಎಸ್ ಪರ ಕೆಲಸ ಮಾಡ್ತಿದ್ದಾರೆ. ಕಾರಣಾಂತರಗಳಿಂದ ಬಂದಿಲ್ಲ. ನಾನೇ ಅವರನ್ನ ಪ್ರಚಾರಕ್ಕೆ ಕರೆತರುತ್ತೇನೆ. ಹುಣಸೂರಿನಲ್ಲಿ ಕಾರ್ಯಕರ್ತರ ಉತ್ಸಹ ಕಳೆದ ಚುನಾವಣೆಗಿಂತ ಹೆಚ್ಚಾಗಿದೆ. ವಿಶ್ವನಾಥ್ ಅವರು ಹುಣಸೂರಿನ‌ ಜನಕ್ಕೆ ಮೋಸ ಮಾಡಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ವಿಶ್ವನಾಥ್‌ರವರು ಮಾಡಿರುವ ತಪ್ಪು ಜನರಿಗೆ ಗೊತ್ತಾಗಿದೆ. ಅದರ ಪರಿಣಾಮವನ್ನ ಚುನಾವಣೆ ಫಲಿತಾಂಶದಲ್ಲಿ ಜನರೇ ತೋರಿಸುತ್ತಾರೆ. ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್‌ ಮೊದಲ ಸ್ಥಾನ ಪಡೆಯಲಿದೆ ಎಂದರು.

ನನ್ನ ಮೊದಲ ದಿನದ ಪ್ರಚಾರವನ್ನ ಹೆಗ್ಗಂದೂರಿನಿಂದ ಆರಂಭಿಸಿದ್ದೇನೆ. ಎರಡು ವರ್ಷದ ಹಿಂದೆ ಇದೆ ಗ್ರಾಮಕ್ಕೆ ಬಂದಿದ್ದೆ‌. ಈ ಗ್ರಾಮಕ್ಕು ನನಗು ಒಂದು ಅವಿನಾಭಾವ ಸಂಬಂಧ ಇದೆ. ನನ್ನ ಮನೆ ದೇವರು ಶಿವ ಬೆಳಗ್ಗೆ ದೇವಾಲಯಕ್ಕೆ ಹೋಗೋಕೆ ಆಗಲಿಲ್ಲ. ಆದ್ರೆ ಈ ಗ್ರಾಮದಲ್ಲಿ ಶಿವನ ದೇವಾಲಯಕ್ಕೆ ಕರೆದುಕೊಂಡು ಬಂದಿದ್ದೀರಾ. ನನಗೆ ಹುಣಸೂರಿನ ಮೇಲೆ ಅಭಿಮಾನ ಇದೆ. ಪ್ರಜ್ವಲ್ ರಾಜ್ಯದ್ಯಾಂತ ಹೆಸರು ಮಾಡಲು ಹುಣಸೂರು ಕಾರಣ.

ವಿಶ್ವನಾಥ್ ಅವರು ದೇವೇಗೌಡರನ್ನ ಎದೆಲಿ ಇಟ್ಟುಕೊಂಡಿದ್ದೀನಿ ಅಂತಾರೆ. ಬೆನ್ನಿಗೆ ಚೂರಿ ಹಾಕಿ ಎದೆಲಿ ಇಟ್ಟುಕೊಂಡಿದ್ದೀನಿ ಅಂತಿರಲ್ಲ‌ ನಾಚಿಕೆ ಆಗೋಲ್ವಾ ನಿಮಗೆ. ವಿಶ್ವನಾಥ್‌ಗೆ ವಿರುದ್ದ ವಾಗ್ದಾಳಿ ಮಾಡಿದ ಪ್ರಜ್ವಲ್ ರೇವಣ್ಣ. 150 ಕೋಟಿ ಅನುದಾನ ಕೊಟ್ಟರಲ್ಲ ಕುಮಾರಣ್ಣ ಏನ್ ಮಾಡಿದ್ರಿ. ನಾನು 95 ಕೋಟಿ ಅನುದಾನಕ್ಕೆ ರೇವಣ್ಣನವರ ಬಳಿ ಸಹಿ ಹಾಕಿಸಿಕೊಟ್ಟನಲ್ಲ ಏನ್ ಮಾಡಿದ್ರಿ. ಯಾವ ಕಾರ್ಯಕರ್ತರನ್ನ‌ ಗುರುತಿಸಿ ಕೆಲಸ ಕೊಟ್ಟಿದ್ರಿ ವಿಶ್ವನಾಥ್‌ ಎಂದು ಹೆಗ್ಗಂದೂರು ಗ್ರಾಮದಲ್ಲಿ ವಿಶ್ವನಾಥ್ ವಿರುದ್ದ ಪ್ರಜ್ವಲ್ ರೇವಣ್ಣ ವಾಗ್ದಾಳಿ ಮಾಡಿದರು.

ಪ್ರತಾಪ್‌ಸಿಂಹ ಅವರು ಕಳೆದ ಚುನಾವಣೆಯಲ್ಲಿ ತಂಬಾಕು ಬೆಳೆಗಾರರ ಬಗ್ಗ ಮಾತನಾಡಿದ್ರು. ಚುನಾವಣೆ ಮುಗಿದ ಮೇಲೆ ಅವರನ್ನ ಮರೆತೆ ಬಿಟ್ಟರು. ಹೆಗ್ಗಂದೂರು ಗ್ರಾಮದಲ್ಲಿ ಪ್ರತಾಪ್‌ಸಿಂಹ ವಿರುದ್ದ ವಾಗ್ದಾಳಿ ಮಾಡಿದ ಪ್ರಜ್ವಲ್ ರೇವಣ್ಣ. ಪ್ರತಾಪ್‌ಸಿಂಹ ಚುನಾವಣೆ ಮುಗಿದ ತಕ್ಷಣ ಬೆಂಗಳೂರನಿಂದ ರೈಲು ತರ್ತಿನಿ ಅಂದ್ರು‌. ಎಲ್ರಪ್ಪ ರೈಲು ಜನರನ್ನ ಪ್ರಶ್ನಿಸಿದ ಪ್ರಜ್ವಲ್ ರೇವಣ್ಣ. ಇಂಥವರ ರೈಲುಗಳನ್ನ ನಾವೇಲ್ಲ‌ ನೋಡಿದ್ದೇವೆ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights