ಜೆಡಿಎಸ್ ಪಕ್ಷವನ್ನು ಕೋತಿಗಳಿಗೆ ಹೋಲಿಕೆ ಮಾಡಿದ ಮಾಜಿ ಡಿಸಿಎಂ ಪರಮೇಶ್ವರ್….!

ಜೆಡಿಎಸ್ ಪಕ್ಷವನ್ನು ಕೋತಿಗಳು ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೋಲಿಕೆ ಮಾಡಿದ್ದಾರೆ.

ಹೌದು..  ಹುಣಸೂರಿನ ಚುನಾವಣಾ ಪ್ರಚಾರದ ವೇಳೆ ಪರಮೇಶ್ವರ್ ಜೆಡಿಎಸ್‌‌ ಅನ್ನ ವ್ಯಂಗ್ಯ ಮಾಡಿದ್ದಾರೆ. ಕೋತಿಗಳು ಮರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಎಗರುತ್ತೆ. ಇದೇಲ್ಲ ನಮ್ಮೂರಿನ ಕಡೆ ಮಾಮೂಲಿ.‌ ಅದೇ ರೀತಿ ಜೆಡಿಎಸ್‌ನವರ ಕಥೆ. ಬೆಳಿಗ್ಗೆ ಒಂದು ಹೇಳಿಕೆ, ಸಂಜೆ ಒಂದು ಕೊಡ್ತಾರೆ. ಇಂತವರನ್ನ ಕಟ್ಟಿಕೊಂಡು ನಾವೆಲ್ಲೊಗಿ ಸಾಯೋಣ. ಹೋಗ್ಲಿ ನಮ್ಮ ಜೊತೆ ಇರಿ ಚೆನ್ನಾಗಿ ನೋಡ್ಕೋತಿವಿ ಅಂದ್ರು ಇರಲ್ಲ.

ಅವರ ಜೊತೆಗಾದ್ರು ಹೋಗಿ ಅವರಾದ್ರು ಚೆನ್ನಾಗಿ ನೋಡ್ಕೋತಾರೆ ಅಂದ್ರು ಇರಲ್ಲ. ಇವಂತರಿಗು ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಬಿಜೆಪಿ ಜೊತೆ ಜೆಡಿಎಸ್‌ನವರನ್ನು ತಿರಸ್ಕರಿಸಿ ಅಂತ ಪರಮೇಶ್ವರ್ ಕರೆ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights