ಡಿಸಿಎಂಗಾಗಿ ಒಂದಲ್ಲಾ ಎರೆಡಲ್ಲಾ ನಾಲ್ಕು ಬಾರಿ ಜೀರೋ ಟ್ರಾಫಿಕ್ : ಹೈರಾಣಾದ ವಾಹನ ಸವಾರರು

ರಾಜಕಾರಣಿಗಳು ಹೇಳುವುದು ಒಂದು ಮಾಡುವುದು ಮತ್ತೊಂದು ಅನ್ನೋ ಮಾತು ಇಂದು ಚಿಕ್ಕಮಂಗಳೂರಿನಲ್ಲಿ ನಿಜವಾಗಿದೆ.

ಹೌದು… ಇಂದು ಬೆಳಿಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಗೆ ಚಿಕ್ಕಮಗಳೂರು ಪ್ರವಾಸದ ವೇಳೆ ನಾಲ್ಕು ಬಾರಿ ಜೀರೋ ಟ್ರಾಫಿಕ್ ಮಾಡಲಾಗಿದೆ. 28-8-2019 ರಂದು ತಮಗೆ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಜೀರೋ ಟ್ರಾಫಿಕ್ ನ ಅವಶ್ಯಕತೆ ಇಲ್ಲವೇ ಇಲ್ಲ ಎನ್ನವ ಮಾತನ್ನ ಮಾದ್ಯಮದಲ್ಲಿ ಪ್ರಸ್ತಾಪ ಮಾಡಿದ್ದರು.

ಅಶ್ವಥ್ ನಾರಾಯಣ್ ತಾವು ಡಿಸಿಎಂ ಸ್ಥಾನ ಪಡೆದ ವೇಳೆ ತಮಗೆ ಜೀರೋ ಟ್ರಾಫಿಕ್ ಅವಶ್ಯಕತೆ ಇಲ್ಲ ಎನ್ನುವ ಮಾತನ್ನ ಹೇಳಿದ್ದರು. ಆದರೆ ಇಂದು ಒಂದಲ್ಲಾ ಎರಡಲ್ಲಾ ನಾಲ್ಕು ಬಾರಿ ಜೀರೋ ಟ್ರಾಫಿಕ್ ಮಾಡಿದ್ದಾರೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ನಗರದ ತೊಗರಿಹಂಕಲ್, ಹನುಮಂತಪ್ಪ ವೃತ್ತ, ಮಲಂದೂರು ಸರ್ಕಲ್ನಲ್ಲಿ 4 ಬಾರಿ ಜೀರೋ ಟ್ರಾಫಿಕ್ ಮಾಡಲಾಗಿದೆ. ಇದರಲ್ಲಿ ಬಿಸಿಲಲ್ಲೇ ನಿಂತ ವಾಹನ ಸವಾರರು ರೇಗಾಡಿದ್ದಾರೆ. ಸಚಿವರು ಹೇಳುವುದು ಒಂದು ಮಾಡುವುದೇ ಮತ್ತೊಂದು ಎಂದು ಕಿಡಿ ಕಾರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights