ದಮಯಂತಿಯಾಗಿ ಅಬ್ಬರಿಸಲಿರುವ ರಾಧಿಕಾ ಕುಮಾರಸ್ವಾಮಿ, ಮಲಯಾಳಂ ಪೋಸ್ಟರ್​ ನಲ್ಲೂ ಗಮನ ಸೆಳೆ ರಾಧಿಕಾ ಲುಕ್​

ಬಹಳ ವರ್ಷಗಳ ನಂತರ ರಾಧಿಕಾ ವಿಭಿನ್ನ ಲುಕ್​ ನಲ್ಲಿ ಪ್ರೇಕ್ಷಕರೆದುರು ಬರುತ್ತಿದ್ದಾರೆ.  ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷಿತ ದಮಯಂತಿ ಚಿತ್ರದ ಮಲಯಾಳಂ ಆವೃತ್ತಿಯ ದಮಯಂತಿ ಪೋಸ್ಟರ್​ ಗುರುವಾರ, ಅ.17 ರಂದು ಬಿಡುಗಡೆಯಾಗಿದೆ.

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ ಲಾಲ್​ ಪೋಸ್ಟರ್​ ಬಿಡುಗಡೆಗೊಳಿಸಿದ್ದಾರೆ. ರಾಧಿಕಾ ಪೋಸ್ಟರ್​ ನಲ್ಲಿ ಖಡಕ್​ ಲುಕ್​ ನಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಭರವಸೆ ಮೂಡಿಸಿದ್ದಾರೆ.  ಅ.7 ರಂದು ನಟಿ ರಾಧಿಕಾರ ದಮಯಂತಿ ಚಿತ್ರದ 2 ನೇ ಲುಕ್​ ಬಿಡುಗಡೆಯಾಗಿತ್ತು. ದಸರಾ ಹಿನ್ನೆಲೆಯಲ್ಲಿ ಚಿತ್ರದ ಸೆಕೆಡ್ ಲುಕ್ ನ್ನು ರಿಲೀಸ್ ಮಾಡಲಾಗಿತ್ತು,  ದಮಯಂತಿ ಟೀಸರ್​ ನ ಕನ್ನಡ ಆವೃತ್ತಿ ಸೆ.20 ರಂದು ಬಿಡುಗಡೆಯಾಗಿತ್ತು.

ಅರಮನೆಯೊಂದರಲ್ಲಿ ರಾತ್ರಿಯ ವೇಳೆ ಕೆಂಪು ಸೀರೆಯನ್ನು ಧರಿಸಿದ ರಾಣಿಯ ಅವತಾರದಲ್ಲಿ ಕಾಣುವ ರಾಧಿಕಾ ಸಿಂಹಾಸನದ ಮೇಲೆ ಕುಳಿತುಕೊಂಡು ಗಂಭೀರ ನೋಟ ಬೀರುವುದನ್ನು ನಾವು ಟೀಸರ್​ ನಲ್ಲಿ ಕಾಣುತ್ತೇವೆ.  ಚಿತ್ರದಲ್ಲಿ ರಾಧಿಕಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಭಜರಂಗಿ ಖ್ಯಾತಿಯ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ಮಜಾ ಟಾಕೀಸ್​ ನ ಪವನ್​ ಮತ್ತು ಇತರರನ್ನು ಒಳಗೊಂಡಿದೆ.

ಚಿತ್ರವನ್ನು ನವರಸನ್​ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಶ್ರೀ ಲಕ್ಷ್ಮಿ ವೃಶಾದ್ರಿ ಪ್ರೊಡೊಕ್ಷನ್​ ಸಂಸ್ಥೆ ನಿರ್ಮಾಣ ಮಾಡಿದೆ. ಆರ್​ ಎಸ್​ ಗಣೇಶ್​ ನಾರಾಯಣ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಿ ಕೆ ಎಚ್​ ದಾಸ್​ ಅವರ ಕ್ಯಾಮರಾ ಕೈಚಳಕ ಇದೆ.

ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ದಮಯಂತಿ ಭಯಾನಕ, ಕುತೂಹಲಕಾರಿ ಮತ್ತು ಹಾಸ್ಯ ಭರಿತ ಚಿತ್ರವಾಗಿದೆ. ಇದು 80 ರ ದಶಕದ ಚಿತ್ರವಾಗಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ರಾಧಿಕಾ ಕುಮಾರಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತನ್ನ ತಂದೆಯ ನಂತರದಲ್ಲಿ ಮಗಳು ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥೆಯನ್ನು ಚಿತ್ರ ಒಳಗೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights