ದಸರಾಗಾಗಿ ಎರಡು ಹಂತಗಳಲ್ಲಿ ಪೊಲೀಸ್ ಬಂದೂಬಸ್ತ್…

ವಿಶ್ವವಿಖ್ಯಾತ ಮೈಸೂರು ದಸರಾಗಾಗಿ ಸಕಲ ಸಿದ್ದತೆಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಯಾವುದೇ ಅಹಿಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ತತ್ ಪಡಿಣಾಮ ಎರಡು ಹಂತಗಳಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.

ಹೌದು… ಮೈಸೂರು ದಸರಾ ವೀಕ್ಷಣೆಗೆ ರಾಜ್ಯದಾದ್ಯಂತ ಮಾತ್ರವಲ್ಲದೆ ದೇಶ ವಿದೇಶಗಳಿಂದಲೂ ಜನ ಕಿಕ್ಕಿರಿದು ಬಾಗವಹಿಸುತ್ತಾರೆ. ಇದರಿಂದ ಬಿಗಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸರು ಎರಡು ಹಂತದಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಸೆ.29ರಿಂದ ಅ.5ರವರೆಗೆ ಮೊದಲ ಹಂತ. ಅ.6ರಿಂದ ಅ.8ರವೆಗೆ ಎರಡನೆ ಹಂತದ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.

ಇಡೀ ದಸರಾಗೆ ಇಟ್ಟು 8407‌ ಮಂದಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.  ಮೈಸೂರು ನಗರದ 2978 ಪೊಲೀಸರು, ಹೊರ ಜಿಲ್ಲೆಗಳಿಂದ 4429 ಪೊಲೀಸರು, 1000 ಮಂದಿ ಹೋಂಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
SP/DCP ಹುದ್ದೆಯ 14, ACP/DYSP ಹುದ್ದೆಯ 54,  PI/RPI ಹುದ್ದೆಯ 153,  PSI/RSI ಹುದ್ದೆಯ 336, ASI/ARSI ಹುದ್ದೆಯ 703, HC/PC ಹುದ್ದೆಯ 6147, HG ಹುದ್ದೆಯ 1000 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮೆರವಣಿಗೆ ಮಾರ್ಗದಲ್ಲಿ 212 ಸಿಸಿ ಕ್ಯಾಮಾರ ಅಳವಡಿಕೆ ಮಾಡಲಾಗಿದ್ದು, ಮೈಸೂರಿನಾಧ್ಯಂತ ಒಟ್ಟು ಸಾರ್ವಜನಿಕರು ಅಳವಡಿಸಿರುವ 11,917 ಸಿಸಿ ಕ್ಯಾಮಾರಗಳ‌ ದೃಶ್ಯಗಳ ಸಹಕಾರ ಪಡೆಯಲು ನಿರ್ಧಾರ ಮಾಡಲಾಗಿದೆ.
ಅರಮನೆ ಹಾಗೂ ಬನ್ನಿಮಂಟಪ ಗೇಟ್‌ನಲ್ಲಿ ಬಾಡಿ ಕ್ಯಾಮಾರ ಇರುವ ಸಿಬ್ಬಂದಿಗಳ‌ ನಿಯೋಜನೆ ಮಾಡಲಾಗಿದ್ದು,  ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ ಡ್ರೋಣ್ ಕ್ಯಾಮಾರ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.
ಈ ಮೂಲಕ ಯಾವುದೇ ಅಹಿಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ದಸರಾ ಭದ್ರತೆ ಬಗ್ಗೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights