ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿದ್ದ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ….!

ತಿಹಾರ್ ಜೈಲು ವಾಸ ತಪ್ಪಿಸಿಕೊಳ್ಳಲು ಯಾವ ಪ್ರಯತ್ನ ಮಾಡಿದರೂ ಕೂಡ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಸಾಧ್ಯವಾಗಲೇ ಇಲ್ಲ. ಕೊನೆಗೂ ಡಿಕೆಶಿ ತಿಹಾರ್ ಜೈಲು ಪಾಲಾಗಿದ್ದಾರೆ.

ನೆನ್ನೆ ವಿಚಾರಣೆ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಡಿಕೆ ಶಿವಕುಮಾರ್ ನ್ನು ಇಂದು ಪೊಲೀಸರು ತಿಹಾರ್ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆಶಿಗೆ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇನ್ನಿ ನ್ಯಾಯಾಂಗ ಬಂಧನದಲ್ಲಿರುವ ಡಿಕೆಶಿ ಜಾಮೀನು ಪಡೆಯಲು ಹರ ಸಾಹಸ ನಡೆಸುತ್ತಿದ್ದು, ಅಲ್ಲಿಯವರೆಗೂ ತಿಹಾರ್ ಜೈಲಿನಲ್ಲೇ ಇರಬೇಕಾಗುತ್ತದೆ. ತಿಹಾರ್ ಜೈಲಿನ ಬ್ಯಾರೆಕ್ ನಂಬರ್ 7ರಲ್ಲಿ ಡಿಕೆಶಿ ಬಂಧಿಸಲಾಗುತ್ತದೆ. INX ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲು ಪಾಲಾಗಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂರನ್ನು ಇಟ್ಟಿರುವ ಜೈಲು ಕೊಠಡಿಯ ಪಕ್ಕದಲ್ಲೇ ಡಿಕೆಶಿ ಸೆಲ್ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಒಂದು ವೇಳೆ ಇವತ್ತೂ ವಾದ-ಪ್ರತಿವಾದ ಮುಂದುವರಿಯಬಹುದು ಅಥವಾ ವಾದ-ಪ್ರತಿವಾದ ಮುಗಿದು ಇವತ್ತೇ ಡಿಕೆಶಿಗೆ ಜಾಮೀನು ನೀಡಬಹುದು ಇಲ್ಲವೇ ಜಾಮೀನು ಅರ್ಜಿ ತಿರಸ್ಕರಿಸಬಹುದು ಅಥವಾ ಆದೇಶವನ್ನ ಕಾಯ್ದಿರಿಸಬಹುದು. ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights