ದೇವಸ್ಥಾನಗಳಿಗೂ ತಟ್ಟಿದ ಕೃಷ್ಣಾ ನದಿಯ ಮಹಾಪ್ರವಾಹದ ಎಫೆಕ್ಟ್….

ಕೃಷ್ಣಾ ನದಿಯ ಮಹಾಪ್ರವಾಹದ ಎಫೆಕ್ಟ್ ದೇವಸ್ಥಾನಗಳಿಗೂ ತಟ್ಟಿದೆ, ನದಿ ದಡದಲ್ಲಿರುವ ದೇವಸ್ಥಾನಗಳು ಜಲಕಂಟಕದಿಂದ ನಲುಗಿವೆ, ಈಗ ಪ್ರವಾಹ ಕಡಿಮೆಯಾಗಿದ್ದರೂ ದೇವಸ್ಥಾನಗಳಿಗೆ ಭಕ್ತರು ಬರುತ್ತಿಲ್ಲ.

ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಗೆ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಿವೆ, ಅದರಲ್ಲಿಯೂ ಕೃಷ್ಣಾ ನದಿಯ ಅಬ್ಬರದಿಂದಾಗಿ ನದಿ ಪಾತ್ರದ ಜನತೆ ಕಂಗಾಲಾಗಿದ್ದಾರೆ, ಮಹಾಪ್ರವಾಹದ ಎಫೆಕ್ಟ ಕೇವಲ ಮನುಷ್ಯರಿಗೆ ಅಲ್ಲ ದೇವರಿಗೂ ತಟ್ಟಿದೆ, ಆಗಷ್ಟ ಹಾಗು ಸೆಪ್ಟಂಬರ್ ತಿಂಗಳಲ್ಲಿ ಒಟ್ಟು 2 ತಿಂಗಳಲ್ಲಿ ಕೃಷ್ಣಾ ನದಿಯು ಉಕ್ಕಿ ಹರಿದಿದ್ದಾಳೆ, ಇದೇ ಸಂದರ್ಭದಲ್ಲಿ ಆಗಷ್ಟ ತಿಂಗಳಲ್ಲಿ ಭಾರಿ ಪ್ರವಾಹ ಉಂಟಾಗಿತ್ತು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ನಾರಾಯಣಪುರದ ಬಸವಸಾಗರ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ ನೀರು ಬಿಟ್ಟಾಗ ನದಿ ಪಾತ್ರದಲ್ಲಿರುವ ಗ್ರಾಮಗಳು ಮುಳುಗಿ ಹೋಗಿದ್ದವು, ಅದರಲ್ಲಿ ದೇವದುರ್ಗಾ ತಾಲೂಕಿನಲ್ಲಿರುವ ಗೂಗಲನ ಶ್ರೀ ಅಲ್ಲಮಪ್ರಭುಗಳ ದೇವಸ್ಥಾನವು ಮುಳುಗಿತ್ತು, ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದ ಶೂನ್ಯ ಪೀಠಾಧಿಶರಾಗಿದ್ದ ವಚನಕಾರ ಶ್ರೀ ಅಲ್ಲಮಪ್ರಭುಗಳು 12 ನೆಯ ಶತಮಾನದಲ್ಲಿ ಇಲ್ಲಿಯ ಗವಿಯ ಕಲ್ಲಿನ ಮೇಲೆ ಅನುಷ್ಠಾನ ಮಾಡಿದ್ದರು, ಅದಕ್ಕಾಗಿ ಗವಿಗಲ್ಲು ಬರುಬರುತ್ತಾ ಗೂಗಲ್ ಎಂದಾಗಿದೆ, ಪ್ರಸಿದ್ದವಾಗಿರುವ ಗೂಗಲ್ ಅಲ್ಲಮಪ್ರಭುಗಳ ದೇವಸ್ಥಾನವು ಸಂಪೂರ್ಣವಾಗಿ ಮುಳುಗಿತ್ತು. ಮಧ್ಯೆ ಸ್ವಲ್ಪ ದಿನ ಪ್ರವಾಹ ಕಡಿಮೆಯಾದಾಗ ದೇವಸ್ಥಾನದಲ್ಲಿದ್ದ ಕೆಸರನ್ನು ಸ್ವಚ್ಛ ಮಾಡಿದ್ದರು, ಈಗ ಕೃಷ್ಣಾ ನದಿಯಲ್ಲಿ ಪ್ರವಾಹವಿದ್ದು ದೇವಸ್ಥಾನದ ಹತ್ತಿರದಲ್ಲಿಯೇ ನದಿ ನೀರು ಹರಿಯುತ್ತಿದೆ, ಮೇಲಿಂದ ಮೇಲೆ ಪ್ರವಾಹದಿಂದಾಗಿ ಅಲ್ಲಮಪ್ರಭುಗಳ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ,

ದೇವಸ್ಥಾನಕ್ಕೆ ಶ್ರಾವಣ ಮಾಸದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತಿತ್ತು, ಈ ವರ್ಷ ಶ್ರಾವಣ ಮಾಸದಲ್ಲಿಯೇ ದೇವಸ್ಥಾನದೊಳಗೆ ನೀರು ನುಗ್ಗಿತ್ತು, ಪ್ರವಾಹ ಕಡಿಮೆಯಾದ ನಂತರವೂ ಆಗಾಗ ಕೃಷ್ಣಾ ನದಿಯು ಉಕ್ಕಿ ಹರಿಯುತ್ತಿರುವದರಿಂದ ಅಲ್ಲದೆ ನದಿ ಪಾತ್ರದಲ್ಲಿಯ ದೇವಸ್ಥಾನಗಳಿಗೆ ಭಕ್ತರು ಬರಲು ಭಯ ಪಡುತ್ತಿರುವದರಿಂದ ಈಗ ಗೂಗಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ, ಇದರಿಂದಾಗಿ ದೇವಸ್ಥಾನ ಸುತ್ತಲು ವ್ಯಾಪಾರಿಗಳಿಗೆ ವ್ಯಾಪಾರವು ಇಲ್ಲದಂತಾಗಿದೆ,

ಇದೇ ತಾಲೂಕಿನ ಕೊಪ್ಪುರದಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನವು ಸಹ ಪ್ರವಾಹದಿಂದಾಗಿ ಮುಳುಗಿ ತೇಲುತ್ತಿದೆ, ಇದರಿಂದಾಗಿ ಇಲ್ಲಿಯೂ ಭಕ್ತರ ಸಂಖ್ಯೆ ಕಡಿಮೆಯಾಗಿದೆ, ಕೃಷ್ಣಾ ಪ್ರವಾಹ ದೇವರನ್ನು ಬಿಟ್ಟಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights