ದೇವೇಗೌಡ್ರ ಕುಟುಂಬ‌ ಮತ್ತು ಕುಮಾರಸ್ವಾಮಿ ವಿರುದ್ದ ನಿಲ್ಲದ ಚಲುವರಾಯಸ್ವಾಮಿ ವಾಗ್ದಾಳಿ….

ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿರು.

ನಾನು ಯಾರನ್ನು ಟೀಕೆ ಮಾಡ್ತಿಲ್ಲ. ವಾಸ್ತವವಾಗಿ ೧೫ ತಿಂಗಳಲ್ಲಿ ನಮ್ಮ‌ ಜಿಲ್ಲೆಯ ಸಮಸ್ಯೆಗೆ ಯಾಕೇ ಪರಿಹಾರ ಕೊಡ್ತಿಲ್ಲ ಅಂತಾ ಕೇಳ್ತಾ ಇದ್ದೀನಿ ಅಷ್ಟೆ. ನಾನು ಯಾರನ್ನು ಟೀಕೆ ಮಾಡಲ್ಲ. ನನಗೆ ಇಲ್ಲಿ ಬಿಜೆಪಿ ಈಗ ಮೂರು ತಿಂಗಳ ನ್ಯೂನತೆ ಹೇಳಬಹುದು. ಉಳಿದ ೧೫ ತಿಂಗಳದ್ದು ಯಾರದ್ದು ಹೇಳಬೇಕು ನಾನು ಅವ್ರದ್ದೇ ಹೇಳಬೇಕಲ್ಲ. ೧೫ ತಿಂಗಳು ಶಾಸಕರ್ಯಾರು ಇದ್ರು,ಜೆಡಿಎಸ್ ಶಾಸಕರಿದ್ರು. ನಾರಾಯಣಗೌಡ್ರು‌ ಈಗ ಅಲ್ಲಿ ಹೋಗಿರಬಹುದು,ಬಟ್ ಆಗ ೭ ಜನ ಶಾಸಕರು ಜಿಲ್ಲೆಯವರಿದ್ರು. ೧೪ ತಿಂಗಳಲ್ಲಿ ಅವ್ರು ಮಾಡಿರತಕ್ಕಂತಹ ಜಿಲ್ಲೆಯ ಜನ್ರ ನೆಗ್ಲೆಟ್ ಮಾಡಿದ್ದಾರಲ್ಲ ಅದರ ಬಗ್ಗೆ ನಾನು ಹೇಳಲೇ ಬೇಕಲ್ಲ ಚುನಾವಣೆಯಲ್ಲಿ. ಈಗ ಮೂರು ತಿಂಗಳಲ್ಲಿ ವಿಫಲ ಆಗಿದೆ,ನಮ್ಮ ಜಿಲ್ಲೆಯಲ್ಲಿ ಸಂಪೂರ್ಣವಾದಂತಹ ಗಮನ ಹರಿಸಿಲ್ಲ.

ಫ್ಯಾಕ್ಟರಿಯಿಂದ ಹಿಡಿದು‌ ಅಭಿವೃದ್ದಿಯಿಂದ ಹಿಡಿದು ಆದ್ರೆ ೧೪ ತಿಂಗಳಿಂದ ಅವ್ರು ಮಾಡಿಲ್ಲ. ಎರಡು ಪಕ್ಷನು‌ನಮಗೆ ನಮ್ಮ ಜಿಲ್ಲೆನಲ್ಲಿ ಜನ್ರು ಪರವಾಗಿ ಸಮಸ್ಯೆ ಪರವಾಗಿ ಸ್ಪಂದಿಸಿಲ್ಲ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದವರು ಸರಿಯಾಗಿ ಆಡಳಿತ ನಡೆಸಲು ಬಿಡಲಿಲ್ಲವೆಂಬ ಎಚ್ಡಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಚಲುವರಾಯ ಸ್ವಾಮಿ, ಮುಖ್ಯಮಂತ್ರಿ ಆಫೀಸ್ ಗೆ ಯಾರು ಬೀಗ ಹಾಕಲ್ಲ. ಶಾಸಕರಿರೋ ಅಸೆಂಬ್ಲಿಯಲ್ಲಿ ಬಂದು ಕೂಗಾಡಬಹುದು. ನಮ್ಮಲ್ಲಿ ಕಾಂಗ್ರೆಸ್ ನವರು ಏನಾದ್ರು ಬಂದು ಇವರ ವಿರುದ್ದ ಅಸೆಂಬ್ಲಿಯಲ್ಲಿ ಕೂಗಾಡಿರೋದು‌ ನೋಡಿದ್ದೀರಾ, ಸಾಧ್ಯ ಇಲ್ಲ. ನೆಪ ಹೇಳೋದಿಕ್ಕೆ ಬೇಕಾದಷ್ಟು ಇರಬಹುದು,ಆದ್ರೆ ಮುಖ್ಯಮಂತ್ರಿಯಾಗಿ ಸಿಂಗಲ್ ಮ್ಯಾನ್ ಆಗಿ ಅಧಿಕಾರ ಮಾಡ್ತಿದುದ್ದು ಅವ್ರು. ೮ ಸಾವಿರ ಕೋಟಿ ಜಿಲ್ಲೆಗೆ ಕೊಟ್ಟಿದ್ದೀನಿ ಅಂತಾರೆ ಅದೇಲ್ಲಿದೆ ತೋರಿಸಲಿ. ಹೇಮಾವತಿಲಿ‌ ನಡೆಕೊಂಡ ರೀತಿ ಇರಬಹುದು ನೀರನ್ನು ಬಿಡೋದಕ್ಕೆ ಯೋಚನೆ ಮಾಡಿದಂತಹ ರೀತೀಲಿ ಇರಬಹುದು, ೮ ಸಾವಿರ ಕೋಟಿನಾ ಕೊಟ್ಟ ವಿಚಾರದಲ್ಲಿ ಇರಬಹುದು ಪ್ಯಾಕ್ಟರಿ ಜಿಲ್ಲಿಸಿದ ವಿಚಾರದಲ್ಲಿ ಇರಬಹುದು ಅವೆಲ್ಲಾ ಸತ್ಯ ಅಲ್ವ. ಇವತ್ತು ೨ ಷುಗರ್ ಫ್ಯಾಕ್ಟರಿಚಾಲನೆ ಇಲ್ಲದೆ ಇರೋದ್ರಿಂದ ಇವತ್ತು ಜಿಲ್ಲೆಯ ೭ ಕ್ಷೇತ್ರದ ಕಬ್ಬು ಬೆಳೆಗಾರರ ಪರಿಸ್ಥಿತಿ ಬೀದಿಗೆ ಬಂದಿರೋದು ವಾಸ್ತವ ಸತ್ಯ‌ ಅಲ್ವಾ ಎಂದು  ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ.

ನಾನು ದೇವೇಗೌಡ್ರ ಕುಟುಂಬದ ಜೊತೇಲಿ ಕೆಲಸ ಮಾಡಿದವನು. ದೇವೇಗೌಡ್ರು ಕುಟುಂಬದ ವಿರುದ್ದ ಅವತ್ತೆ ನಾನು ಜನ ನನ್ನನು ಗೌರವ ಕೊಟ್ಟಿದ್ದಾರೆ. ನಾನು ದೊಡ್ಡ ಲೀಡರ್ ಅಂತಾ‌ ಹೇಳಿ ಕೊಳ್ಳಲ್ಲ,ಜನ ಜಿಲ್ಲೆಯಲ್ಲಿಯೇ ಆಗ್ಲಿ ರಾಜ್ಯದಲ್ಲಿಯೇ ಆಗ್ಲಿ ಜನ ನನ್ನನ್ನು ಗೌರವ ಕೊಟ್ಟಿದ್ದಾರೆ. ನಾನು ಅವ್ರ ಬಗ್ಗೆ ಮಾತನಾಡಲ್ಲ,ನಾನು ದೇವೇಗೌಡ್ರ ಬಗ್ಗೆ ಮಾತನಾಡೋ ಪ್ರವೃತ್ತಿನೇ ಬೆಳೆಸಿಕೊಂಡಿಲ್ಲ. ದೇವೇಗೌಡ್ರು ಪ್ರಶ್ನಾತೀತವಾಗಿ ನಾವೇಲ್ರು‌ ಅವ್ರನ್ನ ನಾಯಕರೆಂದು ಒಪ್ಪಿದ್ದೀವಿ. ಇವ್ರು ಮತ್ತು ಅವ್ರ ಮಕ್ಕಳುಗಳು ಇತ್ತೀಚಿನ ದಿನಗಳಲ್ಲಿ ಮಾಡಿರುವಂತ ಕೆಲ್ಸ ಆಡಳಿತ ವ್ಯವಸ್ಥೆ ಬಗ್ಗೆ ಹೇಳ್ತಿದ್ದೀನಿ. ದೇವೇಗೌಡ್ರು ಕುಟುಂಬದ ಬಗ್ಗೆ ದೇವೇಗೌಡ್ರ ಬಗ್ಗೆ ಟೀಕೆ ಮಾಡೋವಷ್ಟು ದಡ್ಡನು ಅಲ್ಲ, ಅನಾವಶ್ಯಕವಾದುದು. ಉಪಚುನಾವಣೆ ಬಳಿಕ ಸರ್ಕಾರ ಅಸ್ಥಿರವಾಗಲು ಬಿಡಲ್ಲ ಅಂತಾರೆ ಇದರ ಅರ್ಥವೇನು?

ಈ ಕಡೆ ಕಾಂಗ್ರೆಸ್ ನೋರನ್ನ ಉಪಯೋಗಿಸಿಕೊಂಡು ಮುಖ್ಯಮಂತ್ರಿಯಾದ್ರು. ಇವತ್ತು ಅವ್ರ ಪಕ್ಷದವರೇ ಹೋದ್ರು,ಈಗ ೨೦ ಜನ ಹೋಗೋಕೆ ರೆಡಿಯಾಗಿದ್ದಾರೆ ಅಂತಾ ಅವ್ರೆ ಹೇಳುದ್ರು. ಹೋಗೋರೂ ಹೋಗ್ಲಿ ಅಂತೇಳಿದ್ದಾರೆ. ಮತ್ತೊಂದು ಕಡೆ ಅಸ್ಥಿರತೆ‌ ಮಾಡ್ಲಿಕೆ ಬಿಡಲ್ಲ ಅಂತಾರೆ,ಇನ್ನೊಂದ್ಕಡೆ ೧೫ ಜನನ್ನು ಸೋಲಿಸಬೇಕು ಅಂತಾರೆ. ಇದರ ಅರ್ಥವೇನು ಆಗಿದ್ರೆ ಇವ್ರದ್ದು ಅವಕಾಶವಾದಿ ರಾಜಕಾರಣ. ಮತ್ತೆ ಅವ್ರು ಬಿಜೆಪಿ ಜೊತೆ ಕೈ ಜೋಡಿಸೋದು ಅದೆಲ್ ಜೋಡಿಸ್ತಾರೋ ಯಾರ್ ಜೊತೆ ಹೋಗ್ತಾರೋ ಗೊತ್ತಿಲ್ಲ.

ಅವ್ರಿಗೆ ಯಾರ್ ಜೊತೆಲಿ ಹೋಗೋಕೆ ಅವಕಾಶ ಸಿಗುತ್ತೋ ಅದಕ್ಕೆ ಅವ್ರು ಕಾಯ್ತಾ ಇರ್ತಾರೆ. ನಾನು‌ ಜೆಡಿಎಸ್ ವಿರೋಧಿನೂ ಅಲ್ಲ,, ದೇವೇಗೌಡ್ರ ಮನೆ ವಿರೋಧಿನು ಅಲ್ಲ. ದೇವೇಗೌಡ್ರ ಬಗ್ಗೆ ಮಾತನಾಡೋವಷ್ಟು ನಾನು ಅನಾವಶ್ಯಕವಾದಂತಹ ಪದನು ಉಪಯೋಗಿಸಲ್ಲ. ವಾಸ್ತವವಾಗಿ ನನ್ನ ಜಿಲ್ಲೆಯಲ್ಲಿ ಆಗಿರುವಂತಹ ಅನ್ಯಾಯ ಬಗ್ಗೆ ನಿಮ್ಮ ಮುಂದೆ ಇಟ್ಟಿದ್ದೀನಿ. ಈ ಸಮಸ್ಯಯನ್ನು ಜನರ ಮುಂದೆ ಇಟ್ಟಿದ್ದೇನೆಯ ವಿನಃ ಆ ಕುಟುಂಬದ ವಿಚಾರದಲ್ಲಿ ಮಾತನಾಡುವಂತಹ ದೊಡ್ಡವನಲ್ಲ ಎಂದರು.

ಉಪ ಚುನಾವಣೆಯಲ್ಲಿ ಸುಮಲತಾ ಬೆಂಬಲ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ, ಬೆಂಬಲ ಕೊಡುವುದು ಬಿಡುವುದು ಅದು ಅವರಿಗೆ ಬಿಟ್ಟಿದ್ದು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ‌ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಲೀಡರ್ಸ್ ಗಳು ಅವ್ರಿಗೆ ಮಾಡಿದ್ದಾರೆ. ಅವ್ರು ಏನ್ ತೀರ್ಮಾನ ತಗೋತಾರೆ ಕಾದು ನೋಡೋಣ. ನಮ್ಮ ಮುಖಂಡರೆಲ್ಲರು ಅವ್ರಹತ್ರ ಮಾತನಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಮತ್ತು‌ ಅವ್ರ ಅಣ್ಣನ ಮಗ ಕೂಡ ಬಂದು ನನ್ನಹತ್ರ ಮಾತನಾಡಿದ್ದಾರೆ. ನಾವ್ ಏನ್ ಹೇಳಬೇಕೋ ಅದನ್ನ ಹೇಳಿದ್ದೀವಿ ಅವ್ರು ಏನ್ ಹೇಳಬೇಕೋ ಹೇಳಿದ್ದಾರೆ. ಇನ್ನು ಉಳಿದ ತೀರ್ಮಾನ ಅವ್ರಿಗೆ ಬಿಟ್ಟಿದ್ದು. ನಾವು ಅವ್ರಿಗೆ ಯಾವ ಡೆಡ್ಲೈನ್ ಕೂಡ ಅವ್ರಿಗೆ ಕೊಟ್ಟಿಲ್ಲ. ಅವ್ರಿಗೆ ಡೆಡ್ಲೈನ್ ಕೋಡೋ ಪರಿಸ್ಥಿತಿ ಕೂಡ ನಿರ್ಮಾಣ ಮಾಡಿಲ್ಲ. ತೀರ್ಮಾನ ಅವ್ರಿಗೆ ಬಿಟ್ಟಿದ್ದು ಅವ್ರೆನ್ ತೀರ್ಮಾನ ಮಾಡ್ತಾರೋ ಅವ್ರಿಗೆ ಬಿಟ್ಟಿದ್ದು ಎಂದಿದ್ದಾರೆ.

ಜನಾಭಿಪ್ರಾಯ ನಮ್ಮ ಪಕ್ಷದ ಪರವಾಗಿದೆ. ಚುನಾವಣೆಯಲ್ಲಿ ಆರ್ಭಟ ಬೇರೆಯವರದ್ದು ಇರಬಹುದು. ಬಟ್ ನಾನು ಮೂರ್ನಾಲ್ಕು‌ ಹೋಬಳಿಯಲ್ಲಿ ಪ್ರವಾಸ ಮಾಡಿದ್ದೀನಿ, ಎಲ್ಲರ ಜೊತೆ ಮಾತನಾಡಿದ್ದೀನಿ. ಈ ರಾಜ್ಯದಲ್ಲಿ ೧೫ ಉಪ ಚುನಾವಣೆಗೆ ಕಾಂಗ್ರೆಸ್ ಪರವಾಗಿ ಮತ ಹಾಕಿದ್ರೆ ಮಾತ್ರ ಪ್ರಜಾಪ್ರಭುತ್ವ ದಲ್ಲಿ ಅಸ್ತಿತ್ವ ಇರ್ಲಿಕೆ ಸಾಧ್ಯ‌ ಅನ್ನೋದು ಒಂದ್ಕಡೆ. ಜಿಲ್ಲೆಯಲ್ಲಿ ನಮಗೆ ಬಿಜೆಪಿ ಎಷ್ಟೋ ಅದಕ್ಕಿಂತ ಹೆಚ್ಚಾಗಿ ಜೆಡಿಎಸ್ ಸಹ ಎದುರಾಳಿಯಾದರಿಂದ. ಕಳೆದ ೧೪ ತಿಂಗಳಲ್ಲಿ ಅವ್ರಿಗೆ ಕೊಟ್ಟಂತಹ ಅವಕಾಶವನ್ನ ಅವ್ರು ಉಪಯೋಗಿಸಿಕೊಳ್ಳದೆ ಇರೋದ್ರಿಂದ. ಜನ ಅಸಮಧಾನಗೊಂಡಿದ್ದಾರೆ ಖಂಡಿತಾ ನಾವು ಗೆಲ್ತೀವಿ ನಮ್ಮ ಪಕ್ಷದ ಅಭ್ಯರ್ಥಿಗೆ ಒಳ್ಳೆಯದಾಗುತ್ತೆ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights