ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಸಂಚಾರ ದಟ್ಟಣೆ ನಿಯಂತ್ರಿಸಿದ ಟ್ರಾಫಿಕ್ ಪೊಲೀಸ್‌…!

ಧೋ ಎಂದು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಟ್ರಾಫಿಕ್ ಪೊಲೀಸ್‌ ಒಬ್ಬರು ಸಂಚಾರ ದಟ್ಟಣೆ ನಿಯಂತ್ರಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಬಳಿ ಟ್ರಾಫಿಕ್ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಮಾರ್ಗದಲ್ಲಿ ಗೃಹಸಚಿವರ ಕಾರು ಸಾಗಬೇಕಿತ್ತು. ವಾಹನ ದಟ್ಟಣೆ ನಿಯಂತ್ರಿಸುತ್ತಿರುವಾಗ ಭಾರಿ ಪ್ರಮಾಣದ ಮಳೆ ಬರಲು ಆರಂಭಿಸಿದೆ. ಸಚಿವರ ಕಾರು ಮುಂದೆ ಸಾಗುವವರೆಗೂ ಪೊಲೀಸ್ ಪೇದೆ ಮಳೆಯಲ್ಲಿಯೇ ಕರ್ತವ್ಯ ನಿರ್ವಹಿಸಿದ್ದಾರೆ.

ಸಚಿವರ ಕಾರಿನ ಕಾನ್ವೇ ಪೂರ್ಣ ಸಾಗಿದ ನಂತರವೇ ಸ್ಥಳಬಿಟ್ಟು ಕದಲಿದ್ದಾರೆ. ಈ ದೃಶ್ಯಗಳನ್ನು ಸ್ಥಳೀಯರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು‌ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸಂಚಾರಿ‌ ಪೊಲೀಸ್ ಪೇದೆಯ ಕರ್ತವ್ಯನಿಷ್ಠೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights