ನಾಡಗೀತೆಗೆ ಅವಮಾನ ಮಾಡಿದವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಥಾನ….

ನಿನ್ನೆ ಸರ್ಕಾರ ವಿವಿಧ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಅದರಲ್ಲಿ ಕನ್ನಡ ಧ್ವಜ ಮತ್ತು ನಾಡಗೀತೆಗೆ ಸೋಷಿಯಲ್ ಮೀಡಿಯಾದಲ್ಲಿ ಅವಮಾನ ಮಾಡಿದ ಅರೋಪ ಹೊತ್ತಿರುವ ರೋಹಿತ್‌ ಚಕ್ರತೀರ್ಥ ಎನ್ನುವವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಥಾನ ನೀಡಲಾಗಿದೆ.

ಪಟ್ಟಿ ಹೊರಬೀಳುತ್ತಿದ್ದಂತೆಯೇ ಹಲವು ಕನ್ನಡಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಮನಸೋಇಚ್ಛೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಎಲ್ಲಾರ್ನೂ ಗಂಜಿ ಗಿರಾಕಿ ಅಂತಿದ್ದ ಈ ಶಿಷ್ಯ. ನಾಡಗೀತೆ & ಕುವೆಂಪು ಅಂತವರನ್ನು ಅವಮಾನಿಸಿದ್ದ ಇಂತಹವರಿಗೆ ಕನ್ನಡಾಭಿವೃದ್ದಿ ಪ್ರಾಧಿಕಾರದ ಸದಸ್ಯಗಿರಿಯೇ? ಕನ್ನಡಕ್ಕೆ ಇಂತಾ ದುರ್ಗತಿ ಬಂತಲ್ಲಪ್ಪ ಛೆ ! ಎಂದು ರಮೇಶ್ ಹೆಚ್ಕೆ ವ್ಯಂಗ್ಯವಾಡಿದ್ದಾರೆ.

ಹಿಂದೊಮ್ಮೆ ನಾಡಗೀತೆಗೆ ಅವಮಾನ ಮಾಡಿ ಎಲ್ಲರ ಕೈಯಿಂದ ಉಗಿಸಿಕೊಂಡು ಕರ್ನಾಟಕ ರಣಧೀರ ಪಡೆ ವತಿಯಿಂದ ಕೇಸನ್ನೂ ಹಾಕಿಸಿಕೊಂಡಿದ್ದ ಕಿಡಿಗೇಡಿಗೆ ರಾಜ್ಯ ಸರ್ಕಾರದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪಟ್ಟ. Chief Minister of Karnataka ನಿಮಗೆ ನಾಚಿಕೆಯಾಗಬೇಕು ಎಂದು ಕರ್ನಾಟಕ ರಣಧೀರ ಪಡೆಯ ಹರೀಶ್‌ ಕುಮಾರ್‌ ಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ನಾಡಗೀತೆಗೆ ಅವಮಾನ ಮಾಡಿದವನು, ಕನ್ನಡ ಬಾವುಟ ಬೇಡ ಎಂದವನು, ಹಿಂದಿ ಹೇರಿಕೆ ಸಮರ್ಥಿಸಿಕೊಂಡವನು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ. ಕರ್ಮ, ಇನ್ನು ಏನೇನು ನೋಡಬೇಕೊ…..! ಎಂದೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

“ಗಂಜಿ…ಗಂಜಿ ಎಂದು ಜೊಲ್ಲು ಸುರಿಸುತ್ತಾ,
ಹೊಟ್ಟೆ ಉರ್ಕೊಂಡು ರೋದಿಸುತ್ತಿದ್ದ ಗಂಜಲ‌ ಗಿರಾಕಿಯ ಅತೃಪ್ತ ಆತ್ಮ,

ಪ್ರಾಧಿಕಾರದ ಪುಟಗೋಸಿ ಸದಸ್ಯತ್ವದ ‘ಚರಂಡಿತೀರ್ಥ’
ಕುಡಿದು ಶಾಂತವಾಯಿತಂತೆ.” ಎಂಬ ದಿನೇಶ್ ಅಮೀನ್ ಮಟ್ಟುರವರ ಫೇಸ್‌ಬುಕ್ ಪೋಸ್ಟ್‌ ವೈರಲ್‌ ಆಗಿದೆ.

“ಅಂತೂ ಇಷ್ಟು ದಿನ ಗಂಜಿಗಿರಾಕಿಗಳನ್ನು ಟಾರ್ಗೆಟ್ ಮಾಡಿದ್ದಕ್ಕೆ ಕೆಲವರಿಗೆ ಪಂಚಗವ್ಯ ಸಿಕ್ತು.

(ಪಂಚಗವ್ಯ= ಗಂಜಲ+ಸಗಣಿ+ಇತ್ಯಾದಿ ಸೇರಿದ ದ್ರವ)” ಎಂದು ಎನ್‌ ಶಂಕರರವರು ವ್ಯಂಗ್ಯವಾಡಿದ್ದಾರೆ.

“ಈ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಮಾಡಲಾಗಿರುವ ನೇಮಕಗಳು ನಿಜಕ್ಕೂ ಕನ್ನಡದ ಸಾಂಸ್ಕೃತಿಕ ಜೀವಂತಿಕೆಗೆ ಕೊಡಲಿ ಪೆಟ್ಟು. ಹೀಗೆ ಮುಂದುವರೆದರೆ ….” ಎಂದು ವೀರಣ್ಣ ಮಡಿವಾಳರರವರು ಆತಂಕ ವ್ಯಕ್ತಪಡಿಸಿದ್ದಾರೆ..

“Chief Minister of Karnataka  ಕನ್ನಡ ನಾಡಗೀತೆಗೆ ಮತ್ತು ನಾಡಿಗೆ ಅಗೌರವ ಮತ್ತು ಅವಮಾನ ಮಾಡಿದ್ದ ವ್ಯಕ್ತಿಯನ್ನೆ ನಿಮ್ಮ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಮಾಡಿದೆ.

ನಿಮ್ಮ ಈ ತೀರ್ಮಾನ ಕನ್ನಡ ತಾಯಿ ಭುವನೇಶ್ವರಿಗೇ ಬಗೆದ ದ್ರೋಹ ಅಲ್ಲವೇ.?” ಎಂದು ನಾಗೇಗೌಡ ಕೀಲಾರ ಶಿವಲಿಂಗಯ್ಯನವರು ಪ್ರಶ್ನಿಸಿದ್ದಾರೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights