ನಾನು ಮಸಾಲೆ ದೋಸೆ ತಿಂದ್ರೆ 18% ಟ್ಯಾಕ್ಸ್ ಕಟ್ಟಬೇಕು – ಕೇಂದ್ರದ ವಿರುದ್ಧ ಪರಂ ಗರಂ

ಹುಣಸೂರು ಬನ್ನಿಕುಪ್ಪೆಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭಾಷಣದ ವೇಳೆ ಆಪರೇಷನ್ ಕಾಂಗ್ರೆಸ್ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಉಪಚುನಾವಣೆಯಲ್ಲಿ ನಿಮಗೆ 8 ಸ್ಥಾನ ಬೇಕು. ಆಗ ಮಾತ್ರ ಬಿಜೆಪಿ ಸರ್ಕಾರ ಉಳಿಯೋದು. ನೀವು 9 ಸ್ಥಾನ ಗೆಲ್ಲಿ ಎಂದು ಪರಮೇಶ್ವರ್ ಬಿಜೆಪಿಯವರಿಗೆ ಸಲಹೆ ನೀಡಿದ್ದಾರೆ. ಆದ್ರೆ ಒಂದೆ ಒಂದು ಸ್ಥಾನ ಜಾಸ್ತಿ ಇಟ್ಕೊಂಡು ಸರ್ಕಾರ ಮಾಡ್ತಿರಾ. ಅವತ್ತಿನ ಸಂಜೆ 2 ಇಬ್ಬರು ನಮ್ ಕಡೆ ಬಂದ್ರೆ ಏನ್ ಮಾಡ್ತೀರಾ? ಯಾರೋ ಹೇಳ್ತಿದ್ರು ವಿಶ್ವನಾಥ್ ಗೆದ್ರೆ ಮಂತ್ರಿ ಆಗ್ತಾರೆ ಅಂತ. ಸರ್ಕಾರ ಇದ್ದರಲ್ಲವೇ ಇವರು ಮಂತ್ರಿ ಆಗೋದು ಎಂದು ಈ ವೇಏ ವಿಶ್ವನಾಥ್‌ಗೆ ಟಾಂಗ್ ಪರಮೇಶ್ವರ್ ಕೊಟ್ಟಿದ್ದಾರೆ. ಚುನಾವಣೆ ಮುಗಿದ ಮೇಲೆ ಬಿಜೆಪಿ ಸರ್ಕಾರ ಬಿಳುತ್ತೆ ಎಂದು ಭವಿಷ್ಯ ಹೇಳಿದ್ದಾರೆ.

ಬ್ಯಾಂಕ್‌ಗೆ ದುಡ್ಡು ಹಾಕಿದ್ರು ನೋಟೀಸ್.ಬ್ಯಾಂಕ್‌ನಿಂದ ದುಡ್ಡು ತೆಗೆದ್ರು ನೋಟೀಸ್. ಇದೇಂತ ಆರ್ಥಿಕ ವ್ಯವಸ್ಥೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ್ದಾರೆ. ನಾನು ಮಸಾಲೆ ದೋಸೆ ತಿಂದ್ರೆ 18% ಟ್ಯಾಕ್ಸ್ ಕಟ್ಟಬೇಕು. ಇದೇಂತ ಜಿಎಸ್‌ಟಿ..?  ಕೇಂದ್ರದ ಜಿಎಸ್‌ಟಿಯನ್ನ‌ ಲೇವಡಿ ಮಾಡಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ನೂರಕ್ಕೆ ನೂರು ನಾನು ಬರೆದುಕೊಡ್ತಿನಿ‌ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಚುನಾವಣೆಯಲ್ಲು ಮಂಜುನಾಥ್‌ಗೆ ಸಹಾಯ ಮಾಡಿ.

ಪ್ರಚಾರಕ್ಕೆ ಬಂದ ಪರಮೇಶ್ವರ್‌ಗೆ ನೀವು ಮುಖ್ಯಮಂತ್ರಿ ಆಗಿ ಅಂತ ಜನರಿಂದ ಘೇರಾವ್‌‌ ಮಾಡಲಾಯಿತು.ಸಿದ್ದರಾಮಯ್ಯ ಮುಖ್ಯಮಂತ್ರಿ ಮಾಡಲು ಮಂಜುನಾಥ್‌ಗೆ ಏಕೆ ಮತ ಹಾಕಬೇಕು? ಎಂದು ಬನ್ನಿಕುಪ್ಪೆ ಗ್ರಾಮದಲ್ಲಿ ಪರಮೇಶ್ವರ್‌ಗೆ ಗ್ರಾಮಸ್ಥರ ನೇರ ಪ್ರಶ್ನೆ ಕೇಳಿದರು. ನೀವು ಮುಖ್ಯಮಂತ್ರಿಯಾಗುವುದಾದರೆ ನಾವು ಮತ ಹಾಕುತ್ತೇವೆ. 10 ವರ್ಷ ಅಧ್ಯಕ್ಷರಾಗಿದ್ದೀರಿ ಏಕೆ ಸಿಎಂ ಮಾಡಲಿಲ್ಲ. ನೀವು ಗಟ್ಟಿಯಾಗಿ ಮಾತನಾಡುವುದಿಲ್ಲ. ಪರಮೇಶ್ವರ್‌ಗೆ ಮುತ್ತಿಗೆ ಹಾಕಿ ದಲಿತ ಯುವಕರು ಪ್ರಶ್ನೆ ಮಾಡಿದರು. ಜನರ ಪ್ರಶ್ನೆಗೆ ಉತ್ತರ ನೀಡಲಾಗದೆ ಪರಮೇಶ್ವರ್ ತೆರಳಿದ್ದಾರೆ.

ಅನರ್ಹ ಶಾಸಕರ ಬಗ್ಗೆ ಜನ ಸೈಲೆಂಟ್ ರಿಯಾಕ್ಟ್ ಮಾಡ್ತಾರೆ. ನನ್ನ ಸ್ನೇಹಿತ ವಿಶ್ವಣ್ಣ ಜನತಾದಳಕ್ಕೆ ಹೋಗ್ತಾರೆ ಅಂತಾನೆ ಊಹಿಸಿರಲಿಲ್ಲ. ಅವರು ಬಿಜೆಪಿಗೆ ಹೋಗಿದ್ದು ನೋವಾಯ್ತು. ಚುನಾವಣೆ ಮುಗಿದ ಮೇಲೆ ಈ ಸರ್ಕಾರಕ್ಕೆ ಇರುವ ಸಮಯದ ಬಗ್ಗೆ ಮಾತಾಡ್ತಿನಿ. ಯಾರ್ರಿ ಹೇಳಿದ್ದು ಸಿದ್ದರಾಮಯ್ಯ ಒಂಟಿ ಅಂತ. ನಾವೇಲ್ಲ ಸಿದ್ದರಾಮಯ್ಯ ಜೊತೆ ಇದ್ದೇವೆ. ಬಿಜೆಪಿಯನ್ನ ಸಿದ್ದರಾಮಯ್ಯ ಅಟ್ಯಾಕ್ ಮಾಡೋದಕ್ಕೆ ಅವರನ್ನ ಟಾರ್ಗೆಟ್ ಮಾಡ್ತಾರೆ ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights