ಪ್ಲಾಸ್ಟಿಕ್ ನಾಶಕ್ಕೆ ಒಂದೊಳ್ಳೆ ಉಪಾಯ : ಪರಿಸರ ಸ್ನೇಹಿ ಬಿದಿರಿನ ಬಾಟಲ್ ಬಳಕೆ

ಪ್ಲಾಸ್ಟಿಕ್ ಬಳಕೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಹಾನಿಕರ. ಪರಿಸರ ಮಾಲಿನ್ಯದ ಜೊತೆ ಪ್ಲಾಸ್ಟಿಕ್‌, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ನಾಶ ಮಾಡುವುದು ಬಹಳ ಕಷ್ಟ. ಪ್ಲಾಸ್ಟಿಕ್ ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡಿರುವ ಮೋದಿ ಸರ್ಕಾರ, ಅಕ್ಟೋಬರ್ 2ರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರುತ್ತಿದೆ.

ಮೋದಿ ಸರ್ಕಾರಕ್ಕೆ ಬೆಂಬಲ ನೀಡಲು ಎಂಎಸ್‌ಎಂಇ ಸಚಿವಾಲಯ ಮುಂದಾಗಿದೆ. ಎಂಎಸ್‌ಎಂಇ ಸಚಿವಾಲಯದಡಿ ಕೆಲಸ ನಿರ್ವಹಿಸುವ ಖಾದಿ ಗ್ರಾಮೋದ್ಯೋಗ, ಬಿದರಿನ ಬಾಟಲಿಯನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ. ಎಂಎಸ್‌ಎಂಇ ಸಚಿವಾಲಯ ಬಿದರಿನ ಬಾಟಲಿಯನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ.

ಬಿದರು ಪರಿಸರ ಸ್ನೇಹಿ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಎಂಎಸ್‌ಎಂಇ ಸಚಿವಾಲಯ ಬಿದರಿನ ಬಾಟಲಿಗೆ ಮಹತ್ವ ನೀಡಿದೆ. ಬಾಟಲಿ ಸಾಮರ್ಥ್ಯ ಕನಿಷ್ಠ 750 ಎಂಎಲ್ ಇರಲಿದೆ. ಇದ್ರ ಬೆಲೆ 300 ರೂಪಾಯಿಯಿಂದ ಪ್ರಾರಂಭವಾಗಲಿದೆ. ಬಾಟಲಿ ದೀರ್ಘಕಾಲ ಬಾಳಿಕೆ ಬರಲಿದೆ. ಹಾಳಾದ್ರೆ ಅದ್ರ ವಿಲೇವಾರಿ ಸುಲಭ. ಸಚಿವ ನಿತಿನ್ ಗಡ್ಕರಿ ಈ ಬಾಟಲಿಯನ್ನು ಅಕ್ಟೋಬರ್ 1ರಂದು ಬಿಡುಗಡೆ ಮಾಡಲಿದ್ದಾರೆ. ಅಕ್ಟೋಬರ್ 2ರಿಂದ ಖಾದಿ ಮಳಿಗೆಗಳಲ್ಲಿ ಈ ಬಾಟಲಿ ಲಭ್ಯವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights