ಬಿಜೆಪಿಗೆ ಗೆಲ್ಲುವ ವಿಶ್ವಾಸವಿಲ್ಲದೆ ಆಪರೇಷನ್ ಕಮಲಕ್ಕೆ ಮುಂದಾಗಿದೆ – ದಿನೇಶ್ ಗುಂಡೂರಾವ್ ಗರಂ

ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ ಬಿಜೆಪಿಗೆ ಒಂದು ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿಲ್ಲ. ಹೀಗಾಗಿ ಮತ್ತೆ ಆಪರೇಷನ್ ಕಮಲ ಮುಂದುವರೆಸಲು ಮುಂದಾಗುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಇಂದು ಗೋಕಾಕ್ ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ. 15 ಕ್ಷೇತ್ರಗಳಲ್ಲಿ ಒಂದನ್ನೂ ಬಿಜೆಪಿ ಗೆಲ್ಲುವುದು ಕಷ್ಟ. ಸರ್ಕಾರ ರಾಜ್ಯದಲ್ಲಿ ಇದೆಯೋ ಇಲ್ಲವೋ ಎನ್ನುವ ಹಾಗೆ ಆಗಿದೆ. 2 ತಿಂಗಳಿಂದ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಚುನಾವಣೆಗೋಸ್ಕರ ಸರ್ಕಾರ ಎಲ್ಲವನ್ನೂ ಬಿಟ್ಟಿದೆ. ಚುನಾವಣೆಗೆ ಹಣ ಮಾಡಲು ವರ್ಗಾವಣೆ ದಂಧೆ ಸೇರಿ ಕೆಲಸದಲ್ಲಿ ಸರ್ಕಾರ ತೊಡಗಿದೆ ಎಂದು ಹರಿಹಾಯ್ದರು.

ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಗೆಲವು ಖಚಿತ. ಜನ ಪಕ್ಷಾಂತರ ಮಾಡಿರುವ ಶಾಸಕರಿಗೆ ಪಾಠ ಕಲಿಸಲಿದ್ದಾರೆ. ಮಂತ್ರಿ, ಉಪಮುಖ್ಯಮಂತ್ರಿಗಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ​ ಬಿಜೆಪಿಗೆ ಹೋದರು. ಇವರಿಗೆ ಯಾವುದೇ ಸಿದ್ದಾಂತ, ಜನಪರ ಕಾಳಜಿ ಇಲ್ಲ. ರಾಜ್ಯದಲ್ಲಿ ಸ್ವಾರ್ಥ ಉದ್ದೇಶಕ್ಕಾಗಿ ಅನೇಕರು ಬಿಜೆಪಿಗೆ‌ ಹೋಗಿದ್ದಾರೆ. ಮೈತ್ರಿ ಸರ್ಕಾರ ರಚನೆ ನಂತರದ ಎಲ್ಲಾ ಬೆಳವಣಿಗೆ ಜನ ನೋಡಿದ್ದಾರೆ. ಅವರು ಪಾಠ ಕಲಿಸುತ್ತಾರೆಂದು ಕಿಡಿಕಾರಿದರು.

ಇನ್ನು ನಮಗೆ ರಮೇಶ್​ ಜಾರಕಿಹೊಳಿ‌ ಬಗ್ಗೆ ಸಹನೆ ಇತ್ತು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರು ತಮ್ಮ ಸ್ವಾರ್ಥಕ್ಕಾಗಿ ಪದವಿ ಬಯಸಿದ್ದಾರೆ. ಇಂತವರನ್ನು ಗೋಕಾಕ್ ಜನ ತಿರಸ್ಕರಿಸಬೇಕು. ರಮೇಶ್​​ ಜಾರಕಿಹೊಳಿ‌ಗೆ ಸೋಲಿನ ಭೀತಿ‌ ಇದೆ. ಹೀಗಾಗಿ ಕ್ಷೇತ್ರದಲ್ಲಿ ರಮೇಶ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights