ಬಿಜೆಪಿ ಮಾಸ್ ಪಾರ್ಟಿ. ಚುನಾವಣೆಯಲ್ಲಿ ಗೆದ್ದೆ ಗೆಲ್ತೇವೆ – ಸಿ ಟಿ ರವಿ

ಮುಂದಿನ ತಿಂಗಳು ನಡೆಯುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎಲ್ಲಾ ರೀತಿಯ ರಣ ತಂತ್ರ ಪಕ್ಷಗಳು ನಡೆಸುತ್ತಿವೆ. ಈ ಬಾರಿ ಸ್ವತಂತ್ರವಾಗಿ ಕಣಕ್ಕಿಳಿವ ಜೆಡಿಎಸ್ ಕೂಡ ಉಪಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸುವ ಹಂಬಲದಲ್ಲಿದೆ. ಕಾಂಗ್ರೆಸ್ ಪಕ್ಷವೂ ಕೂಡ ಅಭ್ಯಾರ್ಥಿಗಳ ಆಯ್ಕೆಯೊಂದಿಗೆ ಗೆಲ್ಲುವ ಸಂಚು ಹೊಂಚು ಹಾಕುತ್ತಿದೆ. ಈ ಬೆನ್ನಲ್ಲೆ ನಮ್ಮ ಬಿಜೆಪಿ ಮಾಸ್ ಪಾರ್ಟಿ. ಚುನಾವಣೆಯಲ್ಲಿ ಗೆದ್ದೆ ಗೆಲ್ತೇವೆ ಎನ್ನುವ ವಿಶ್ವಾಸ ದಾವಣಗೆರೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಇಲ್ಲದಿದ್ದಾಗಲೇ ಗೆದ್ದಿದ್ದೇವೆ. ಈಗ ಅಧಿಕಾರದಲ್ಲಿದ್ದೇವೆ ಗೆಲ್ಲುತ್ತೇವೆ. ಕಾಂಗ್ರೆಸ್ ಪ್ರತಿಭಟನೆ ಮೂಲಕ ರಾಜಕೀಯ ಮಾಡುತ್ತಿದೆ. ಸಂತ್ರಸ್ತರ ಶಾಪ ತಟ್ಟುತ್ತೆ ಅಂತಾರೆ. ಆದ್ರೆ ಹಿಂದಿನ ಶಾಪದಿಂದ ಕಾಂಗ್ರೆಸ್ ಇನ್ನೂ ವಿಮೋಚನೆ ಆಗಿಲ್ಲ. ಹಿಂಗೆ ಮಾತಾಡಿದವರು ಏನಾದ್ರು ಅಂತ ಗೊತ್ತಿದೆ. ತಮ್ಮದೇ ಕ್ಷೇತ್ರದಲ್ಲಿ ಗೆಲ್ಲಲಾಗದೆ ಬೇರೆ ಕ್ಷೇತ್ರದಲ್ಲಿ ಪರದಾಡಿ ಗೆದ್ದರು ಎಂದು ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಜಿ ಟಿ ಡಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಿಟಿ ರವಿ ಅವರು, ನಮ್ಮಲ್ಲಿ ಯಾವುದೇ ಅಸ್ಪೃಶ್ಯತೆ ಇಲ್ಲ. ಜಿ ಟಿ ಡಿ ಆಗಲಿ, ಸಿದ್ದರಾಮಯ್ಯ ಆಗಲಿ, ಕುಮಾರಸ್ವಾಮಿ ಆಗಲಿ ನಮ್ಮ ತತ್ವ ಸಿದ್ದಾಂತ ಒಪ್ಪಿ ಬಿಜೆಪಿಗೆ ಬರಬಹುದು ಎಂದಿದ್ದಾರೆ.

ಈ ವೇಳೆ ಸಾರಾ ಮಹೇಶ್ ವಿಶ್ವನಾಥ ಟಾಕ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಇಬ್ಬರು ಅಶ್ಲೀಲ ಪದಗಳನ್ನು ಬಳಸಬಾರದಿತ್ತು. ಇಬ್ಬರು ಮಾತನಾಡಿದ್ದು ಮೈಸೂರು ಸಂಸ್ಕೃತಿಗೆ ತಕ್ಕದ್ದಲ್ಲ. ಅನರ್ಹ ಶಾಸಕರು ಬಿಜೆಪಿ ಸರ್ಕಾರ ಬರಲು ಪರೋಕ್ಷವಾಗಿ ಸಹಕರಿಸಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿರಿಯರು ಕ್ರಮವಹಿಸುತ್ತಾರೆ ಎಂದರು.

ಇನ್ನೂ ಎಂ ಬಿ ಪಾಟೀಲ್ ಹೇಳಿಕೆಗೆ ಸಚಿವ ಸಿ ಟಿ ರವಿ ಮಾತನಾಡಿ, 2018_19 ರಲ್ಲಿ ಕಾಂಗ್ರೇಸ್ ಸೋತ್ತಿದ್ದು ಯಾವ ಶಾಪದಲ್ಲಿ. ಅವರು ಮಾಡಿದ ಶಾಪದ ವಿಮೋಚನೆ ಏಳು ಜನ್ಮಕ್ಕೂ ತೀರಲ್ಲಾ. ನಮಗೆ ಶಾಪಕೊಡುವ‌ ತಾಖತ್ತು ಕಾಂಗ್ರೇಸ್ ಗೆ ಇಲ್ಲಾ. ಕೇಂದ್ರ ಸರ್ಕಾರ ನೆರೆ ಪರಿಹಾರ ಒಂದು ರೂಪಾಯಿ ಉಳಿಸಿಕೊಳ್ಳಲ್ಲಾ. ನೆರೆ ವಿಚಾರದಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳೋದು ಬೇಡ. ಸಮಾಜ ಒಡೆಯುವ ಕೆಲಸ ಮಾಡಿದ್ರೂ ಆಗಲಿಲ್ಲಾ. ಎಂ ಪಿ ಚುನಾವಣೆಯಲ್ಲಿ ತಿಣುಕಾಡಿ ಒಂದು ಸ್ಥಾನ ಗೆಲ್ತು ಎಂದರು.

ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವ ಕಾಂಗ್ರೇಸ್ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿ ಟಿ ರವಿ, ಸಿದ್ದರಾಮಯ್ಯರಿಗೆ ಎಲ್ಲಾ ಸಾಮರ್ಥ ದೇವರು ಕೊಟ್ಟಿದ್ದಾನೆ. ಅವರಿಗೆ ಹತ್ತು ಗ್ರಾಮ ದತ್ತು ತೆಗದುಕೊಳ್ಳಿ, ಬಿಜೆಪಿ ೧೫ ತೆಗೆದುಕೊಳ್ಳುತ್ತೆ, ಜೆಡಿಎಸ್ ಸುಮ್ಮನಿರದೆ ಐದು ಗ್ರಾಮ ದತ್ತು ತೆಗೆದುಕೊಳ್ಳುತ್ತೆ ಎಂದು ಹೇಳಿದ್ದೇ. ಪಾಜಿಟೀವ್ ಮೆಸೆಜ್ ಹೋಗುತ್ತೆ ಎಂದಿದ್ದೇ, ಅವರಿಗೆ ಪ್ರತಿಭಟನೆಯೇ ಪಾಜಿಟೀವ್ ಲೀಡರ್ ಶಿಪ್ ಮೆಸೆಂಜ್ ಎಂದಾದರೆ ನಾವೇನು ಮಾಡಲ್ಲಾ. ರಾಜಕೀಯ ಎಂಬುದು ಸೋಡ ಗ್ಯಾಸ್ ಇದ್ದಂಗೆ ಅದು ಟುಸ್ ಎಂದು ಸುಮ್ಮನಾಗುತ್ತೆ. ಹದ್ದಾಗಿ ಕುಕ್ಕತಲ್ಲೋ ಎಂದು ಮಾರ್ಮಿಕವಾಗೀ ಯಾರು ಹದ್ದು ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights