ಭದ್ರಾ ನದಿಯಲ್ಲಿ ರೋಮಾಂಚನಕಾರಿ ರಿವರ್ ರ್ಯಾಪ್ಟಿಂಗ್ : ಮಸ್ತ್ ಎಂಜಾಯ್ ಮಾಡಿದ ಪ್ರವಾಸಿಗರು

ಕಾಫಿನಾಡಂದ್ರೆ ಬರಿ ಕಾರ್ ರ್ಯಾಲಿಯಷ್ಟೆ ಅಲ್ಲ. ಅಂತಹಾ ಸಾಹಸ ಕ್ರೀಡೆಗೆ ಇದೀಗ ರ್ಯಾಫ್ಟಿಂಗ್ ಕೂಡ ಸೇರಿದೆ. ಮಳೆಗಾಲದಲ್ಲಿ ಭದ್ರೆಯ ಒಡಲು ಭಯಂಕರ ಅನ್ನೋ ಮಾತನ್ನ ಕಾಫಿನಾಡಿಗರು ಸುಳ್ಳಾಗಿಸಿದ್ದಾರೆ. ವರುಣ ರುದ್ರನರ್ತನದ ಬಳಿಕ ಕಾಫಿನಾಡು ಶಾಂತಗೊಂಡಿದ್ದು, ಸಾಧಾರಣ ಮಳೆಯಾಗ್ತಿದೆ. ನದಿ, ಹಳ್ಳ-ತೊರೆಗಳು ಮೈದುಂಬಿ ಹರಿಯುತ್ತಿವೆ. ಅಪಾಯದ ಮಟ್ಟವಲ್ಲದಿದ್ರು ಮೈದುಂಬಿ ಹರಿಯುತ್ತಿರೋ ಭದ್ರೆಯ ಒಡಲಿನ ಸಾಹಸಮಯ ರಾಫ್ಟಿಂಗ್ ರೋಮಾಂಚನವಾಗಿದೆ. ಮೈ ನವಿರೇಳಿಸೋ ಈ ಸಾಹಸದಲ್ಲಿ ಪಾಲ್ಗೊಳ್ಳಲು ಪ್ರವಾಸಿಗ್ರು ಮುಗಿಬಿಳ್ತಿದ್ದಾರೆ. ಭದ್ರೆಯ ಭಯಂಕರ ಒಡಲಲ್ಲಿನ ರಾಫ್ಟಿಂಗ್‍ನ ನೀವು ನೋಡಿ ಎಂಜಾಯ್ ಮಾಡಿ….

ಚಿಕ್ಕಮಗಳೂರಂದ್ರೆ ಬರಿ ಕಾರ್ ರ್ಯಾಲಿಯಲ್ಲ. ಮಲೆನಾಡಿನ ಗ್ರಾಮೀಣ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಮೈದುಂಬಿ ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಸಾಹಸಮಯ ರ್ಯಾಫ್ಟಿಂಗ್ ನಡೆಸೋದೇ ಥ್ರಿಲ್. ಜಿಲ್ಲೇಲಿ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ವೇಗವಾಗಿ ಹರಿಯೋ ನದಿಯಂದ್ರೆ ಅದು ಭದ್ರ. ಈ ನದಿಯಲ್ಲಿ ರ್ಯಾಫ್ಟಿಂಗ್ ಮಾಡೋದೆ ಸಾಹಸ. ಮಳೆಗಾಲದಲ್ಲಿ ಮೂಡಿಗೆರೆ ತಾಲೂಕಿನ ಬಾಳೆಹೊಳೆ ಬಳಿ ಕಳೆದ ಎಂಟತ್ತು ವರ್ಷಗಳಿಂದ ರ್ಯಾಫ್ಟಿಂಗ್ ನಡೆಯುತ್ತಿದೆ. ಪ್ರವಾಹದಂತೆ ಹರಿಯೋ ಭದ್ರೆಯ ಒಡಲಲ್ಲಿ ಬೋಟ್ ಮೇಲೆ ಕೂತು ಇಳಿಜಾರಿನಲ್ಲಿ ಧುಮ್ಮಿಕ್ಕುವುದೇ ರೋಮಾಂಚನ. ಜಿಲ್ಲೆಯ ಏಸ್ ಪ್ಯಾಡಲರ್ರ್ಸ್ ಸಂಸ್ಥೆ ಇದೇ ಮೊದಲ ಬಾರಿಗೆ ಭದ್ರೆಯ ಒಡಲಲ್ಲಿ ರ್ಯಾಫ್ಟಿಂಗ್ ನಡೆಸುತ್ತಿದೆ. ಏಸ್ ಸಂಸ್ಥೆ ಭದ್ರಾ ನದಿಯಲ್ಲಿ ಸಮೀಕ್ಷೆ ಕೂಡ ನಡೆಸಿದೆ. ಅಪಾಯವಿಲ್ದೆ ರ್ಯಾಫ್ಟಿಂಗ್ ನಡೆಸಲು ಜಿಲ್ಲಾಡಳಿತದ ಅನುಮತಿಯೂ ಇದೆ. ಕುದುರೆಮುಖ, ಕಳಸ ಸೇರಿದಂತೆ ಘಟ್ಟಪ್ರದೇಶದಲ್ಲಿ ಮಳೆಯಾಗ್ತಿದ್ರು ಮೈಕೊರೆಯೋ ಚಳಿಯನ್ನೂ ಲೆಕ್ಕಿಸಿದೆ ಪ್ರವಾಸಿಗರು ರ್ಯಾಫ್ಟಿಂಗ್‍ನ ಎಂಜಾಯ್ ಮಾಡ್ತಿದ್ದಾರೆ.

ಮೈದುಂಬಿ ಹರಿಯೋ ಭದ್ರೆಯ ಒಡಲು ಭಯಂಕರ, ಆಕೆಯ ವೇಗವನ್ನ ಅಳೆಯೋಕೆ ಅಸಾಧ್ಯ ಅನ್ನೋದು ಮಲೆನಾಡಿಗರ ಮಾತು. ಆದ್ರು, ಒಂದಿಷ್ಟು ಭಯವಿಲ್ದೆ ರಾಫ್ಟಿಂಗ್ ನಡೆಸ್ತಾರೆ. ದಟ್ಟ ಕಾನನದ ಭ್ರಹ್ಮಾಂಡ ಅಡವಿಯಲ್ಲಿ ನೈಸರ್ಗಿಕವಾಗಿ ಹರಿಯೋ ಭದ್ರೆ ನೋಡೋರ್ಗೆ ಭಯ ಹುಟ್ಸುತ್ತೆ. ಆದ್ರೆ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಸೇರಿದಂತೆ ಉತ್ತರ ಭಾರತದಿಂದ ಬಂದಿರೋ ರಿವರ್ ಗೈಡರ್ಸ್‍ಗಳು ಅಷ್ಟೆ ಉಪಯುಕ್ತವಾಗಿ ಗೈಡ್ ಮಾಡ್ತಾರೆ. ಬೋಟ್ ಮೇಲೆ ಕುಳಿತೋರ್ಗೆ ಕೆಳಗಿಳಿಯಲು ಮನಸ್ಸಾಗೋಲ್ಲ. 4 ರಿಂದ 10 ಕಿ.ಮೀ. ವರೆಗೂ ಸಾಗಬಹುದಾದ ರಾಫ್ಟಿಂಗ್‍ನಲ್ಲಿ ಸ್ಥಳಿಯರು ಹಾಗೂ ಪ್ರವಾಸಿಗ್ರು ಪಾಲ್ಗೊಳ್ಳುತ್ತಿರೋದು ಆರ್ಗನೈಸರ್‍ಗಳಿಗೆ ಖುಷಿ ತಂದಿದೆ. ನದೀಲಿ ದೊಡ್ಡ-ದೊಡ್ಡ ಗಾತ್ರದ ಬಂಡೆಗಳಿದ್ದು ಅಲ್ಲಲ್ಲೇ ಭಾರಿ ಗಾತ್ರದ ಅಲೆಗಳನ್ನ ಸೃಷ್ಠಿಸ್ತವೆ. ಬಂಡೆಯ ಮೇಲ್ಭಾಗದಲ್ಲಿ ಬೋಟ್‍ಗಳು ಸಾಗುವಾಗಿನ ಅನುಭವ ಮತ್ತಷ್ಟು ರೋಚಕ. ಈ ವೇಳೆ, ರಬ್ಬರ್ ದೋಣಿಯನ್ನ ನಿಯಂತ್ರಿಸೋ ಗೈಡ್‍ಗಳ ಸಾಹನ ನಿಜ್ಕಕ್ಕೂ ಅಚ್ಚರಿ.

ಒಟ್ಟಾರೆ, ಮಳೆಗಾಲದಲ್ಲಿ ಭದ್ರೆಯ ಬಳಿ ಹೋಗೋಕೂ ಹೆದರ್ತಿದ್ದ ಮಲೆನಾಡಿಗರೀಗ ಭದ್ರೆಯ ಒಡಲಲ್ಲಿ ಆಟವಾಡ್ತಿದ್ದಾರೆ. ಹೊರಜಿಲ್ಲೆ, ಹೊರರಾಜ್ಯಗಳಿಂದ ಕಾಫಿನಾಡಿಗೆ ಆಗಮಿಸೋ ಪ್ರವಾಸಿಗರು ರಾಫ್ಟಿಂಗ್‍ನಲ್ಲಿ ಭಾಗವಹಿಸ್ತಿರೋದು ಆರ್ಗನೈಸರ್‍ಗಳ ಪ್ರಯತ್ನಕ್ಕೆ ಸಿಕ್ಕ ಜಯವಾಗಿದೆ. ಸರ್ಕಾರ ಕೂಡ ವಿಶ್ವ ಪ್ರವಾಸೋಧ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ರ್ಯಾಫ್ಟಿಂಗ್ ಆಯೋಜಿಸಿತ್ತು. ಸರ್ಕಾರ ಕೂಡ ಸಂಪೂರ್ಣ ಸಾಥ್ ನೀಡುದ್ರೆ ಕಾಫಿನಾಡಿನ ಪ್ರವಾಸಿ ತಾಣಗಳು ಮತ್ತಷ್ಟು ಜಗಜ್ಜಾಹಿರಾಗೋದ್ರಲ್ಲಿ ಎರಡು ಮಾತಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights