ಭಾರೀ ಮಳೆಗೆ ತುಂಗಾಭದ್ರ ಜಲಾಶಯದಲ್ಲಿ ಅಧಿಕ ನೀರು : ಕಂಪ್ಲಿ- ಚಿಕ್ಕಜಂತಗಲ್ ಸಂಪರ್ಕ ಕಡಿತ

ತುಂಗಾಭದ್ರ ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುತ್ತಿರುವುದರಿಂದ ಭಾರೀ ಪ್ರಮಾಣದ ನೀರು ಜಲಾಶಯ ಸೇರುತ್ತಿದೆ. ಹೆಚ್ಚುವರಿ ನೀರನ್ನ ನಿನ್ನೆಯಿಂದ ನದಿಗೆ ಹರಿಬಿಡುತ್ತಿದ್ದಾರೆ.

ಇಂದು ತುಂಗಾಭದ್ರ ನದಿಗೆ 1.5 ಲಕ್ಷ ನೀರು ಹರಿಬಿಟ್ಟಿದ್ದಾರೆ. ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಕಂಪ್ಲಿ- ಚಿಕ್ಕಜಂತಗಲ್ ಸಂಪರ್ಕ ಕಡಿತವಾಗೊಂಡು, ಜನಜೀವನ ಅಸ್ತವ್ಯಸ್ತತವಾಗಿದೆ. ಚಿಕ್ಕಜಂತಗಲ್ಲ ಬಳಿ ನದಿ ನೀರಿಗೆ ಪಂಪ್ಸೆಟ್ ಕೊಚ್ಚಿ ಹೋಗುವ ಭೀತಿಯಿಂದ ರೈತರು ಕಾಪಾಡಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಇನ್ನು ನದಿ ದಡದಲ್ಲಿದ್ದ ಗಂಗಾಪರಮೇಶ್ವರಿ ದೇವಸ್ಥಾನದ ಅರ್ಚಕ ದೇವಸ್ಥಾನಕ್ಕೆ ಬೀಗ ಜಡಿದು ಗಂಟೂ ಮೂಟೆ ಸಮೇತ ಹೊರನಡೆದಿದ್ದಾರೆ. ಗಂಗಾವತಿ ತಾಲೂಕಿನ ವಿದೇಶಿಗರ ಹಾಟ್ ಸ್ಪಾಟ್ ವಿರುಪಾಪುರಗಡ್ಡಿ ಜಲಾವೃತಗೊಂಡಿದೆ. ಗಡ್ಡಿಯಲ್ಲಿದ್ದ ಪ್ರವಾಸಿಗರನ್ನ ತಾಲೂಕಾಡಳಿತ ಹೊರಕ್ಕೆ ಕಳಿಸಿದೆ.

ಕಳೆದ ಬಾರೀ ಸುಮಾರು ಸಾವಿರಾರು ಜನ ಪ್ರವಾಸಿಗರು, ನಡುಗಡ್ಡೆಯಲ್ಲಿ ಸಿಲುಕಿದ್ರು, ಅವರನ್ನ ರಕ್ಷಣೆಗೆ ಬಂದವರು ನೀರಿನಲ್ಲಿ ಬೋಟ್ ಮುಳುಗಿ ಕೊಚ್ಚಿ ಹೋಗಿದ್ದು, ಪ್ರಾಣಾಪಾಯದಿಂದ ಸಾವನ್ನೆ ಗೆದ್ದು ಬಂದಿದ್ರು. ಅಷ್ಟೆ ಅಲ್ಲದೆ ನಡುಗಡ್ಡೆಯಲ್ಲಿ ಸಿಲುಕಿವರಿಗೆ ಆತ್ಮಥೈರ್ಯ ಹೇಳಲು ಹೊರಟಿದ್ದ ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸ್ವಲ್ಪದರಲ್ಲೆ ಬಚಾವ್ ಆಗಿದ್ರು. ಈ ಬಾರಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು ನದಿ ಪಾತ್ರದ ಜನ್ರು ನದಿಗೆ ಇಳಿಯದಂತೆ ಡಂಗೂರ ಸಾರಿಸಿದ್ದಾರೆ. ಅಲ್ಲಲ್ಲಿ ಪೊಲೀಸ್, ಕಂದಾಯ ಅಧಿಕಾರಿಗಳನ್ನ ನಿಯೋಜನೆ ಮಾಡಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights