ಮಕ್ಕಳ ದಿನಾಚರಣೆಯಲ್ಲಿ ಮಕ್ಕಳ ಜೊತೆ ಮಗುವಾದ ಯಶ್ ಬಾಸ್….

ಮಕ್ಕಳ ದಿನಾಚರಣೆ ಹಿನ್ನಲೆ ಪರಿಹಾರ ಸೇವಾಸಂಸ್ಥೆ ಆಯೋಜಿಸಿದ್ದ ಮಕ್ಕಳ ದಿನಾಚಾರಣೆ ಕಾರ್ಯಕ್ರಮದಲ್ಲಿ‌ ರಾಕಿಂಗ್ ಸ್ಟಾರ್ ಯಶ್ ಬಾಸ್ ಭಾಗವಹಿಸಿದ್ದರು.

ಪರಿಹಾರ ಸೇವಾಸಂಸ್ಥೆ ಸುಮಾರು 25 ವರ್ಷಗಳಿಂದ ಕೆಲಸ ಮಾಡ್ತಿದೆ.. ಪೋಲಿಸ್ ಕಮೀಶನರ್ ಕಛೇರಿಯಲ್ಲಿ ಮಹಿಳೆಯರು‌,  ಮಕ್ಕಳು‌ ಮತ್ತು ನೊಂದ ಕುಟುಂಬಗಳಿಗೆ ನೆರವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ವಿವಿಧ ಖಾಸಗಿ ಶಾಲೆಯ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಜೊತೆಗೆ ಗ್ರಾಮೀಣ ಸೊಗಡಿನ ಆಟಿಕೆಗಳ ಪ್ರದರ್ಶನ ಕೂಡ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ಸೇರಿ ಕಲಾತಂಡಗಳು ಭಾಗಿಯಾಗಿ ಪ್ರದರ್ಶನ ನೀಡಿದರು.

ಶಾಲಾ ಮಕ್ಕಳಿಂದ ಮಕ್ಕಳ ವಿಧ್ಯಾಭ್ಯಾಸ, ರಕ್ಷಣೆ ಕುರಿತಾ ಅ ಸಾಮಾಜಿಕ ಕಳಕಳಿಯ ನೃತ್ಯ ಪ್ರದರ್ಶನ ಮಾಡಲಾಯಿತು. ನಗರ ಪೊಲೀಸ್ ವತಿಯಿಂದ ಮಕ್ಕಳ ಜಾತ್ರೆ ಕಾರ್ಯಕ್ರಮ, ಇನ್ ಫ್ಯಾಂಟ್ರಿ ರಸ್ತೆಯ ಕಮಿಷನರ್ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಮಕ್ಕಳ ಜಾತ್ರೆ ಕಾರ್ಯಕ್ರಮದಲ್ಲಿ ನಟ ಯಶ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಚ್ಚುವರಿ ಆಯುಕ್ತ ಉಮೇಶ್ ಭಾಗಿಯಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights