ಮತ್ತೆ ಪ್ರವಾಹ ಭೀತಿ : ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸಲು ಉತ್ತಮ ಅಣೆಕಟ್ಟು ನಿರ್ವಹಣೆ ಬಗ್ಗೆ ಸಿಎಂ ಚಿಂತನೆ

ಮತ್ತೆ ಪ್ರವಾಹ ಭೀತಿಯಲ್ಲಿ ಜನ  ಉಸಿರು ಗಟ್ಟಿ ಹಿಡಿದುಕೊಂಡು ಕುಳಿತಿರುವಾಗ  ರಾಜ್ಯದ ಸಿಎಂ  ಆಣೆಕಟ್ಟು ಕಟ್ಟಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಸದ್ಯ ಆಗಿರುವ ಹಾನಿಯಿಂದ ಜನ ಹೊರಬರಲಾಗದೇ, ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ. ಹೀಗಿರುವ ಸಂತ್ರಸ್ತರ ಜೀವನ ಕಟ್ಟಿಕೊಡುವ ಬಗ್ಗೆ ಯೋಚಿಸುವ ಬದಲಾಗಿ ಸಿಎಂ ಆಣೆಕಟ್ಟಿನ ಬಗ್ಗೆ ಯೋಚನೆ ಮಾಡುತ್ತಿರುವುದು ಎಷ್ಟು ಸರಿ ಎನ್ನುವುದು ಕೆಲವರ ವಾದವಾಗಿದೆ.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್‌ ಯಡಿಯೂರಪ್ಪ ಅವರು ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್‌‌ ಅವರನ್ನು ಭೇಟಿ ಮಾಡಿದರು. ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸಲು ಉತ್ತಮ ಅಣೆಕಟ್ಟು ನಿರ್ವಹಣೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಕುರಿತು ಚರ್ಚಿಸಿದರು.  ಈ ವೇಳೆ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಗೃಹ ಸಚಿವರಾದ ಶ್ರೀ ಬಸವರಾಜ್‌ ಬೊಮ್ಮಾಯಿ ಅವರು ಉಪಸ್ಥಿತರಿದ್ದರು.

ಒಂದು ಕಡೆ ಜಿಲ್ಲಾಡಳಿತ ಇರೋ ಸೂರನ್ನು ಕಿತ್ತುಕೊಳ್ಳುತ್ತಿದೆ. ಮತ್ತೊಂದು ಕಡೆ ಮಲೆನಾಡಿಯನ್ನಲ್ಲಿ ಮತ್ತೆ ಮಳೆ ಶುರುವಾಗಿದ್ದು,  ತಿನ್ನಲು ಅನ್ನ ಇಲ್ಲದೇ, ಇರಲು ಸ್ಥಳವಿಲ್ಲದೇ, ಜನ-ಜಾನುವಾರಗಳನ್ನ ಕಳೆದುಕೊಂಡು ಸಂತ್ರಸ್ತರ ಸ್ಥಿತಿ ಹೇಳತೀರದ್ದಾಗಿದ್ದು  ಸಿಎಂ ಮೊದಲು ಜನ ಸಾಮಾನ್ಯರಿಗೆ ಶಾಶ್ವತ ಸೂರಿನ ವ್ಯವಸ್ಥೆಯ ಬಗ್ಗೆ ಯೋಚಿಸುವುದು ಒಳಿತು ಎನ್ನುತ್ತಿದ್ದಾರೆ ನಿರಾಶ್ರಿತರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights