ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆ : ಮತದಾನ ನಡೆದ್ರು ಫಲಿತಾಂಶಕ್ಕೆ ಅಡ್ಡಿಯಾದ ಹೈಕೋರ್ಟ್ ತಡೆಯಾಜ್ಞೆ….

ತೀವ್ರ ಕುತೂಹಲ ಕೆರಳಿಸಿದ ಮಂಡ್ಯದ ಮನ್ಮುಲ್ ನ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣೆ ನಡೆದ್ರು ಅಧ್ಯಕ್ಷ ಸ್ಥಾನದ ಫಲಿತಾಂಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ರಿಂದ ಫಲಿತಾಂಶ ಮಾತ್ರ ಹೊರ ಬರಲಿಲ್ಲ. ಫಲಿತಾಂಶದ ಚೆಂಡು ಹೈ ಕೋರ್ಟ್ ಅಂಗಳದಲ್ಲಿದ್ದು ಸೆ-೨೬ ಕ್ಕೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದ್ದು, ಫಲಿತಾಂಶ ಮತ್ತಷ್ಟು ಕುತೂಹಲ ಕೆರಳಿಸಿದೆ.

ಹೌದು ! ಸಕ್ಕರೆನಾಡು ಮಂಡ್ಯದ ಮನ್ಮುಲ್  ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಘೋಷಣೆಯಾಗಿತ್ತು.ಮದ್ದೂರಿನ ಗೆಜ್ಜಲಗೆರೆಯ ‌ಮಂಡ್ಯ ಹಾಲು ಒಕ್ಕೂಟದ ಕಚೇರಿಯಲ್ಲಿ ಇಂದು ಮತದಾನ ನಡೆಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎ.ಸ್ಪಿ ಸ್ವಾಮಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ರೆ,ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಮಚಂದ್ರು ಸ್ಪರ್ಧೆ ಮಾಡಿದ್ರು.ಮನ್ಮುಲ್ ನ ಅಧ್ಯಕ್ಷ ಸ್ಥಾನವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರೋ ಜೆಡಿಎಸ್ ಪಕ್ಷ ಮತ್ತು ಬಿಜೆಪಿ ಪಕ್ಷದವರು ಶತಾಯಗತ ಮನ್ಮುಲ್ ಅಧಿಕಾರಕ್ಕೆ ತಂತ್ರ ರಣತಂತ್ರವನ್ನು ಹೆಣೆದಿದ್ದು, ಇಬ್ರು ಪಕ್ಷದವರು ತಾವೇ ಮನ್ಮುಲ್ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ರು.

ಇನ್ನು ಮನ್ಮುಲ್ ನ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ೮ , ಕಾಂಗ್ರೆಸ್ ೩, ಹಾಗೂ ೧ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ರು. ಒಟ್ಟು ೧೨ ನಿರ್ದೇಶಕ ಸ್ಥಾನದ ಜೊತೆಗೆ ೪ ಹೆಚ್ಚವರಿ ಮತಗಳಿದ್ದು ಒಟ್ಟು ೧೬ ಮತಗಳು ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆ ಆಗಬೇಕಿತ್ತು.೧ ಸ್ಥಾನ ಪಡೆದ ಬಿಜೆಪಿ ೩ ಕಾಂಗ್ರೆಸ್ ಸದಸ್ಯರ ಬೆಂಬಲದ ಜೊತೆಗೆ ೧ ಎ.ಆರ್ ,೧ ಡಿ.ಆರ್ ಮತಗಳು ,ಹಾಗೂ ೧ ಕೆ.ಎಂ.ಎಫ್ ನಿರ್ದೇಶಕರ ಮತಗಳ ಮೂಲಕ ೮-೮ ಸಮಬಲ ಸಾಧಿಸಿತ್ತು. ಶತಾಯಗತ ಬಿಜೆಪಿಗೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್ಪಿ ಸ್ವಾಮಿ ಯನ್ನು ಆಪರೇಶನ್ ಮಾಡಿ ಬಿಜೆಪಿಗೆ ಸೆಳೆಯಲಾಗಿತ್ತು. ಇದರ ನಡುವೆ ಇಬ್ರು ಜೆಡಿಎಸ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮತ್ತು ಎಚ್.ಟಿ. ಮಂಜುಗೆ ಸಹಾಯಕ ನಿಬಂಧಕರು ಬೈಲಾ ಉಲ್ಲಂಘಟನೆ ಆರೋಪದ ಮೇಲೆ ಸೆ-೨೧ ರಂದು ಅನರ್ಹತೆ ಆದೇಶ ಮಾಡಿದ್ರು. ಅದ್ರೆ ಈ ಇಬ್ಬರು ಹೈ ಕೋರ್ಟ್ ನಿಂದ ಎ.ಆರ್.ಆದೇಶಕ್ಕೆ ತಡೆಯಾಜ್ಞೆ ತಂದಿರೋ ಕಾರಣದಿಂದ ಇಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದ್ರು.೯ ಮತಗಳ ಎಸ್ಪಿ ಸ್ವಾಮಿಗೆ ಬಹುತೇಕ ಬಂದಿರೋ ಕಾರಣದಿಂದ ಬಹುತೇಕ ಎಸ್ಪಿ ಸ್ವಾಮಿ ಅಧ್ಯಕ್ಷರಾಗೋದು ಖಚಿತವಾಗಿದ್ರು. ಇನ್ನು ಅದು ಅಧಿಕೃತವಾಗಿಲ್ಲ. ಗೆಲ್ಲುವ ವಿಶ್ವಾಸದಲ್ಲಿರೋ ಬಿಜೆಪಿ ಆಕಾಂಕ್ಷಿ ಎಸ್ಪಿ ಸ್ವಾಮಿ ಹೈಕೋರ್ಟ್ ತಡೆಯಾಜ್ಞೆ ಮುಗಿದ ಬಳಿಕ ಫಲಿತಾಂಶ ಪ್ರಕಟವಾಗುತ್ತೆ. ನಾವೇ ಗೆಲ್ತೀವಿ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

ಒಟ್ಟಾರೆ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಮನ್ಮುಲ್ ನ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿದಿದ್ದು, ಫಲಿತಾಂಶದ ಚೆಂಡು ಇದೀಗ ಹೈಕೋರ್ಟ್ ಅಂಗಳದಲ್ಲಿದೆ. ಹೈಕೋರ್ಟ್ ತಡೆಯಾಜ್ಞೆಯಿಂದಾಗಿ ಚಲಾವಣೆಯಾದ ಮತಪೆಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಒಯ್ಯಲಾಗಿದೆ. ಮತದಾನದ ಫಲಿತಾಂಶ ಸೆ-೨೬ ಕ್ಕೆ ಹೊರ ಬೀಳಲಿದ್ದು ಯಾರಾಗ್ತಾರೆ ಮನ್ಮುಲ್ ಅಧ್ಯಕ್ಷರು ಅನ್ನೋದ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights